ರೋಗ ನಿರ್ಣಯಿಸದೆ ಔಷಧ ಶಿಫಾರಸು ಮಾಡುವುದು ‘ಶಿಕ್ಷಾರ್ಹ ನಿರ್ಲಕ್ಷ’: ಹೈಕೋರ್ಟ್
Update: 2018-07-26 21:40 IST
ಮುಂಬೈ, ಜು. 26: ರೋಗನಿರ್ಣಯಿಸದೆ ಔಷಧ ಶಿಫಾರಸು ಮಾಡುವುದು ಶಿಕ್ಷಾರ್ಹ ನಿರ್ಲಕ್ಷವಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಹೇಳಿದೆ. ಮಹಿಳಾ ರೋಗಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವೈದ್ಯ ದಂಪತಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ನಿರಾಕರಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ತ್ರೀರೋಗ ಹಾಗೂ ಹೆರಿಗೆ ತಜ್ಞ ದಂಪತಿ ದೀಪಾ ಹಾಗೂ ಸಂಜೀವ್ ಪವಾಸ್ಕರ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಸಾಧನಾ ಜಾಧವ್ ವಿಚಾರಣೆ ನಡೆಸಿದರು. ಕಳೆದ ವರ್ಷ ರೋಗಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಈ ವೈದ್ಯರ ವಿರುದ್ಧ ರತ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.