ಹಸಿವಿನಿಂದ ಸಾವು ನಮ್ಮ ವ್ಯವಸ್ಥೆಯ ಅತಿ ದೊಡ್ಡ ವಿಫಲತೆ: ಸಿಸೋಡಿಯಾ

Update: 2018-07-26 16:13 GMT

ಹೊಸದಿಲ್ಲಿ, ಜು. 26: ಪೂರ್ವ ದಿಲ್ಲಿಯ ಮಂಡವಾಲಿ ಪ್ರದೇಶದಲ್ಲಿ ಮೂವರು ಬಾಲಕಿಯರು ಹಸಿವಿನಿಂದ ಮೃತಪಟ್ಟ ಬಳಿಕ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಡತನ ಹಾಗೂ ಆನಾರೋಗ್ಯದಿಂದ ಸಾವು ಸಂಭವಿಸುತ್ತಿರುವುದು ನಮ್ಮ ವ್ಯವಸ್ಥೆಯ ಅತಿ ದೊಡ್ಡ ವಿಫಲತೆ ಎಂದಿದ್ದಾರೆ. ಆ ಪ್ರದೇಶದಲ್ಲಿ ಜೀವಿಸುತ್ತಿರುವ ಜನರ ದಾಖಲೆ ಸಂರಕ್ಷಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ವಿವರವನ್ನು ಸಲ್ಲಿಸುವಂತೆ ಸಮಗ್ರ ಮಕ್ಕಳ ಅಭಿವೃದ್ಧಿ ಸೇವಾ ನಿರ್ದೇಶನಾಲಯಕ್ಕೆ ಸೂಚಿಸಿದ್ದೇನೆ ಹಾಗೂ ಅವರನ್ನು ಉತ್ತರದಾಯಿಯನ್ನಾಗಿ ಮಾಡಿದ್ದೇನೆ ಎಂದು ಸಿಸೋಡಿಯಾ ಹೇಳಿದರು. ಮಂಗಳವಾರ 1 ಗಂಟೆ ಹೊತ್ತಿಗೆ 8, 4 ಹಾಗೂ 2 ವರ್ಷದ ಮೂವರು ಬಾಲಕಿಯರನ್ನು ಅವರ ತಾಯಿ ಹಾಗೂ ಗೆಳೆಯರು ಆಸ್ಪತ್ರೆಗೆ ತಂದರು. ಬಾಲಕಿಯರು ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ತಿಳಿಸಿತ್ತು. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಾಲಕಿಯರು ಪೋಷಕಾಂಶದ ಕೊರತೆ, ಹಸಿವು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News