ಬಳಕೆದಾರರ ಮಾಹಿತಿ ಸುರಕ್ಷಿತ: ಪೇಟಿಎಂ ಸ್ಪಷ್ಟನೆ

Update: 2018-07-26 16:21 GMT

ಹೊಸದಿಲ್ಲಿ, ಜು.26: ಬಳಕೆದಾರರ ಕುರಿತ ಮಾಹಿತಿಯನ್ನು ವಿದೇಶಿ ಸಂಸ್ಥೆ ಸೇರಿದಂತೆ ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿಸಿರುವ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ, ತಾನು ಭಾರತೀಯ ಮಾಲಕತ್ವದ, ನಿಯಂತ್ರಣದ ಹಾಗೂ ಭಾರತದಲ್ಲಿ ನೆಲೆ ಹೊಂದಿರುವ ಕಂಪೆನಿಯಾಗಿದೆ ಎಂದು ಘೋಷಿಸಿದೆ.

ಗುರುವಾರ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ನರೇಂದ್ರ ಜಾಧವ್ ವಿಷಯ ಪ್ರಸ್ತಾವಿಸಿ, ಚೀನಾದ ಇ-ಕಾಮರ್ಸ್ ದೈತ್ಯ ಸಂಸ್ಥೆ ಆಲಿಬಾಬವು ಪೇಟಿಎಂನ ಅಧಿಕ ಶೇರುಗಳನ್ನು ಖರೀದಿಸಿರುವ ಕಾರಣ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುಗಾಗುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯು, ನಮ್ಮಲ್ಲಿರುವ ದತ್ತಾಂಶ ಮಾಹಿತಿಯನ್ನು ಭಾರತದಲ್ಲಿ ಸಂರಕ್ಷಿಸಿಡಲಾಗುತ್ತದೆ ಮತ್ತು ವಿದೇಶಿ ಸಂಸ್ಥೆ ಸೇರಿದಂತೆ ಯಾರಿಗೂ ಇದನ್ನು ನೀಡಲಾಗುವುದಿಲ್ಲ. ಖಾಸಗಿತನ ಹಾಗೂ ಭದ್ರತೆಯ ವಿಷಯದಲ್ಲಿ ಬಳಕೆದಾರರ ಹಕ್ಕನ್ನು ನಾವು ಗೌರವಿಸುವುದಾಗಿ ಇಂದು(ಗುರುವಾರ) ಪೇಟಿಎಂ ಬ್ರಾಂಡ್‌ನ ಮಾಲಕತ್ವ ಹೊಂದಿರುವ ವನ್9 ಕಮ್ಯುನಿಕೇಷನ್ಸ್ ಪುನರುಚ್ಚರಿಸಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News