ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆಗೆ ಮುಂದಾದ ಮಹಿಳೆ ಸಾವು

Update: 2018-07-26 18:03 GMT

ಕೊಯಂಬತ್ತೂರು, ಜು.26: ಸಾಮಾಜಿಕ ಮಾಧ್ಯಮದಲ್ಲಿ (ಯೂಟ್ಯೂಬ್) ವೀಡಿಯೋವನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾದ 28ರ ಹರೆಯದ ಮಹಿಳೆ ಹೆರಿಗೆ ಸಂದರ್ಭ ಮೃತಪಟ್ಟ ಘಟನೆ ತಮಿಳುನಾಡಿನ ತಿರುಪುರ್ ಎಂಬಲ್ಲಿ ನಡೆದಿದೆ. ದ್ವಿತೀಯ ಹೆರಿಗೆ ಮನೆಯಲ್ಲೇ ನಡೆಯಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಕೃತಿಕಾ ಎಂಬ ಮಹಿಳೆ ಹೆರಿಗೆ ಸಂದರ್ಭ ವಿಪರೀತ ರಕ್ತಸ್ರಾವದ ಕಾರಣ ಮೃತಪಟ್ಟಿದ್ದಾರೆ.

ಕಾರ್ತಿಕೇಯನ್ ಮತ್ತು ಕೃತಿಕಾ ದಂಪತಿಗೆ ಐದು ವರ್ಷದ ಮಗುವಿದೆ. ಪತ್ನಿ ಎರಡನೇ ಬಾರಿ ಗರ್ಭಿಣಿಯಾದಾಗ ಹೆರಿಗೆ ಮನೆಯಲ್ಲೇ ಆಗಬೇಕೆಂದು ದಂಪತಿ ಬಯಸಿದ್ದರು. ಅದರಂತೆ ಯೂಟ್ಯೂಬ್‌ನ ಮಾಹಿತಿಯನ್ನು ಅನುಸರಿಸಲು ಹೋಗಿ ಎಡವಟ್ಟಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ವಿಪರೀತ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದಾಳೆ. ಈ ವೇಳೆ ಮನೆಯಲ್ಲಿ ಆಕೆಯ ಪತಿ ಮತ್ತು ಆತನ ಇಬ್ಬರು ಸ್ನೇಹಿತರಿದ್ದರು. ಅವರಲ್ಲಿ ಯಾರು ಕೂಡಾ ವೈದ್ಯಕೀಯ ಅನುಭವ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಕಾರ್ತಿಕೇಯನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News