×
Ad

ಜಗತ್ತಿನ ಹಿರಿಯಜ್ಜಿ ನಿಧನ

Update: 2018-07-27 23:08 IST

ಟೋಕಿಯೊ, ಜು. 27: ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ, 117 ವರ್ಷದ ಜಪಾನಿ ಮಹಿಳೆ ನಿಧನರಾಗಿದ್ದಾರೆ.

ಚಿಯೊ ಮಿಯಾಕೊ ಎಂಬ ಮಹಿಳೆ ರವಿವಾರ ನಿಧನ ಹೊಂದಿದ್ದಾರೆ ಎಂದು ಅವರ ಕನಗವ ರಾಜ್ಯದ ಸರಕಾರ ಶುಕ್ರವಾರ ಪ್ರಕಟಿಸಿದೆ.

ಅವರು ಕೈಯಲ್ಲಿ ಬರೆಯುವುದನ್ನು ಇಷ್ಟಪಡುತ್ತಿದ್ದರು ಹಾಗೂ ಅದನ್ನು ಇತ್ತೀಚಿನವರೆಗೂ ಅಭ್ಯಾಸ ಮಾಡುತ್ತಿದ್ದರು ಎಂದು ಗಿನ್ನೆಸ್ ದಾಖಲೆಗಳ ಪುಸ್ತಕ ಹೇಳಿದೆ.

ಈಗ ದಕ್ಷಿಣ ಜಪಾನ್‌ನ ಫುಕುವೊಕದ 115 ವರ್ಷದ ಕನೆ ತನಕ ಹೊಸ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News