×
Ad

ಉ.ಪ್ರದೇಶ: ಮಳೆಯ ಅಬ್ಬರಕ್ಕೆ 49 ಮಂದಿ ಬಲಿ

Update: 2018-07-28 20:37 IST

ಲಕ್ನೊ, ಜು.28: ಕಳೆದ ಎರಡು ದಿನದಲ್ಲಿ ಉತ್ತರಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಮಳೆಗೆ ಸಂಬಂಧಿಸಿದ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯ ಹಾವಳಿಗೆ ಸಂಬಂಧಿಸಿ ಅತ್ಯಧಿಕ ಸಾವಿನ ಪ್ರಕರಣ ಸಹಾರನ್‌ಪುರದಲ್ಲಿ ನಡೆದಿದೆ. ಇಲ್ಲಿ 11 ಮಂದಿ ಬಲಿಯಾಗಿದ್ದರೆ, ಆಗ್ರಾ ಮತ್ತು ಮೀರತ್‌ನಲ್ಲಿ ತಲಾ ಆರು, ಮೈನ್‌ಪುರಿಯಲ್ಲಿ ನಾಲ್ವರು, ಕಸ್‌ಗಂಜ್‌ನಲ್ಲಿ ಮೂವರು, ಬರೇಲಿ, ಬಾಘ್‌ಪಟ್ ಮತ್ತು ಬುಲಂಧ್‌ಶಹರ್‌ನಲ್ಲಿ ತಲಾ ಇಬ್ಬರು, ಕಾನ್ಪುರ ದೆಹಾತ್, ಮಥುರಾ, ಗಾಝಿಯಾಬಾದ್, ಹಾಪುರ್, ರಾಯ್‌ಬರೇಲಿ, ಜಲೌನ್, ಜೌನ್‌ಪುರ, ಪ್ರತಾಪ್‌ಗಢ, ಬಾಂಡ, ಫಿರೋಝಾಬಾದ್, ಅಮೇಥಿ, ಕಾನ್ಪುರ ಮತ್ತು ಮುಝಾಫರ್‌ನಗರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಯುದ್ದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದು, ಮೃತಪಟ್ಟವರ ಸಂಬಂಧಿಕರಿಗೆ ತಲಾ 4 ಲಕ್ಷ ರೂ. ಪರಿಹಾರ ಧನ ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News