×
Ad

ಗೋರಕ್ಷಣೆ ಹೆಸರಿನ ಹತ್ಯೆಗಳು ಮುಂದುವರಿದರೆ ದೇಶ ಮತ್ತೊಮ್ಮೆ ವಿಭಜನೆಯಾಗಬಹುದು: ಪಿಡಿಪಿ ನಾಯಕ ಮುಝಫ್ಫರ್

Update: 2018-07-28 21:57 IST

ಶ್ರೀನಗರ, ಜು.28: ಗೋರಕ್ಷಣೆ ಹೆಸರಿನಲ್ಲಿ ಹತ್ಯೆಗಳು ಮುಂದುವರಿದರೆ ದೇಶ ಮತ್ತೊಮ್ಮೆ ವಿಭಜನೆಯಾಗಬಹುದು ಎಂದು ಹಿರಿಯ ಪಿಡಿಪಿ ನಾಯಕ ಬಾರಮುಲ್ಲಾ ಮುಝಫ್ಫರ್ ಹುಸೈನ್ ಹೇಳಿದ್ದಾರೆ.

ಶ್ರೀನಗರದಲ್ಲಿ ಪಿಡಿಪಿಯ 19ನೆ ಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಉಲ್ಲೇಖಿಸಿದ ಅವರು, “ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆಗಳು ನಿಲ್ಲಬೇಕು ಎಂದು ನಾವು ಪ್ರಧಾನಿ ಮೋದಿಯವರಲ್ಲಿ ಕೋರುತ್ತೇವೆ. 1947ರಲ್ಲಿ ಒಂದು ಬಾರಿ ದೇಶ ವಿಭಜನೆಯಾಗಿದೆ. ಇದು ಇನ್ನೂ ಮುಂದುವರಿದರೆ ಮತ್ತೊಮ್ಮೆ ವಿಭಜನೆಯಾಗಬಹುದು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News