ತೆಲುಗು ನಟಿಯ ಪುತ್ರಿ ಆತ್ಮಹತ್ಯೆ
Update: 2018-07-29 21:26 IST
ಹೈದರಾಬಾದ್, ಜು.29: ತೆಲುಗಿನ ಹಿರಿಯ ನಟಿ ಅನ್ನಪೂರ್ಣ ಅವರ ಪುತ್ರಿ ಕೀರ್ತಿ ಶನಿವಾರ ಬಂಜಾರಹಿಲ್ಸ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಟಿಯ ದತ್ತುಪುತ್ರಿಯಾಗಿರುವ ಕೀರ್ತಿ ಮೂರು ವರ್ಷದ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ವೆಂಕಟಕೃಷ್ಣ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕಳೆದ ಆರು ತಿಂಗಳಿಂದ ಅನಾರೋಗ್ಯದಿಂದಿದ್ದ ಕೀರ್ತಿ ಶನಿವಾರ ಬೆಳಿಗ್ಗೆ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ.