ವಿಶ್ವದ ಟಾಪ್ 6 ಮಾರ್ಶಲ್ ಆರ್ಟಿಸ್ಟ್ ಗಳ ಪಟ್ಟಿಯಲ್ಲಿ ಭಾರತದ ಪ್ರಸಿದ್ಧ ನಟ

Update: 2018-07-30 16:06 GMT

ಇತ್ತೀಚೆಗೆ ‘ಲೂಪರ್’ ಸಂಸ್ಥೆ ಬಿಡುಗಡೆಗೊಳಿಸಿದ ವಿಶ್ವದ ಟಾಪ್ 6 ಮಾರ್ಶಲ್ ಆರ್ಟಿಸ್ಟ್ ಗಳ ಪಟ್ಟಿಯಲ್ಲಿ ಭಾರತದ ನಟರೊಬ್ಬರು ಸ್ಥಾನ ಪಡೆದುಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಅವರು ಬೇರ್ಯಾರು ಅಲ್ಲ ‘ಕಮಾಂಡೋ’ ಖ್ಯಾತಿಯ ವಿದ್ಯುತ್ ಜಾಮ್ವಲ್.

“ಇದು ನಿಜವಾಗಿಯೂ ನನಗೆ ಸಂದ ಗೌರವ. ಇಂತಹ ಗೌರವಗಳಿಂದ ನಾನು ಇನ್ನಷ್ಟು ಕಠಿಣ ಮಾಡಲು ಸಾಧ್ಯವಾಗುತ್ತದೆ. ಈ ಕ್ಷಣದಲ್ಲಿ ನಾನೊಬ್ಬ ಹೆಮ್ಮೆಯ ಭಾರತೀಯನಂತೆ ಭಾಸವಾಗುತ್ತಿದೆ” ಎಂದು ಜಾಮ್ವಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಜಾಮ್ವಲ್ ‘ಜಂಗ್ಲೀ’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News