ಜನಸಂಖ್ಯಾ ಸ್ಫೋಟ ಗುಂಪುಹತ್ಯೆಗಳಿಗೆ ನೈಜ ಕಾರಣ ಎಂದ ವಸುಂಧರಾ ರಾಜೆ

Update: 2018-07-31 13:51 GMT

ಜೈಪುರ, ಜು.31: ಗುಂಪು ಹತ್ಯೆ ಪ್ರಕರಣ ಸಂಭವಿಸಲು ಜನಸಂಖ್ಯಾ ಸ್ಫೋಟವೇ ಪ್ರಮುಖ ಕಾರಣ ಎಂದು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಹೇಳಿದ್ದಾರೆ.

ರಾಜಸ್ತಾನದಲ್ಲಿ ಮಾತ್ರವಲ್ಲ, ಗುಂಪು ಹಲ್ಲೆ ಮತ್ತು ಥಳಿತ ಪ್ರಕರಣ ಜಗತ್ತಿನಾದ್ಯಂತ ನಡೆಯುತ್ತದೆ ಎಂದು ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಸುಂಧರಾ ತಿಳಿಸಿದರು. ಜನಸಂಖ್ಯಾ ಸ್ಫೋಟ ಇದಕ್ಕೆ ಪ್ರಮುಖ ಕಾರಣ. ಜನರಿಗೆ ಉದ್ಯೋಗದ ಅಗತ್ಯವಿದೆ. ಉದ್ಯೋಗ ದೊರಕದೆ ಹತಾಶರಾಗಿದ್ದಾರೆ. ಇಂತಹ ಕೃತ್ಯಗಳು ರಾಜಸ್ತಾನದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆ ನಡೆಯುತ್ತಿದೆ. ಇಂತಹ ಕೃತ್ಯಗಳಿಗೆ ಯಾವುದೇ ರಾಜ್ಯಗಳು ಕಾರಣವಲ್ಲ, ಜನತೆಯ ಆಕ್ರೋಶ ಇದಕ್ಕೆ ಕಾರಣವಾಗಿದೆ. ಜನತೆ ತೋರುತ್ತಿರುವ ಸಾಂದರ್ಭಿಕ ಪ್ರತಿಕ್ರಿಯೆ ಇದಾಗಿದೆ ಎಂದು ವಸುಂಧರಾ ರಾಜೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News