ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಕುಟುಂಬ ಸದಸ್ಯರ ಹೆಸರು ನಾಪತ್ತೆ!

Update: 2018-07-31 15:11 GMT

ಕೋಲ್ಕತ್ತಾ, ಜು. 31: ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ ಪಟ್ಟಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅವರ ಕುಟುಂಬದ ಸದಸ್ಯರ ಹೆಸರು ನಾಪತ್ತೆಯಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೊಸದಿಲ್ಲಿಯ ಸಿಬಿಸಿಐ ಕಚೇರಿಯ ಸಮಾವೇಶದಲ್ಲಿ ಮಾತನಾಡಿದ ಸಂದರ್ಭ ಅವರು ಈ ವಿಚಾರ ತಿಳಿಸಿದರು. “ಅಸ್ಸಾಂನ ಎನ್‌ಆರ್‌ಸಿ ಪಟ್ಟಿಯಲ್ಲಿ ನಮ್ಮ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರ ಕುಟುಂಬದ ಸದಸ್ಯರ ಹೆಸರು ಇಲ್ಲದೇ ಇರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಇದಕ್ಕೆ ನಾನು ಏನು ಹೇಳಬೇಕು ?, ಇದಲ್ಲದೆ ಹಲವರ ಹೆಸರು ಈ ಪಟ್ಟಿಯಲ್ಲಿ ಇಲ್ಲ” ಎಂದು ಅವರು ಹೇಳಿದ್ದಾರೆ. ಅಸ್ಸಾಂನ ಎನ್‌ಆರ್‌ಸಿ ಪಟ್ಟಿ ಬಿಡುಗಡೆಗೊಂಡ ಬಳಿಕ ಭಾರತದ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸೋದರಳಿಯ ಝಿಯಾವುದ್ದೀನ್ ಅಲಿ ಅಹ್ಮದ್, ಪಟ್ಟಿಯಲ್ಲಿ ತನ್ನ ಹೆಸರು ನಾಪತ್ತೆಯಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

‘‘ನಾನು ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸೋದರಳಿಯ ಎನ್‌ಆರ್‌ಸಿಯಲ್ಲಿ ನನ್ನ ಹೆಸರು ನಾಪತ್ತೆಯಾಗಿದೆ. ನಮಗೆ ಚಿಂತೆಯಾಗಿದೆ’’ ಎಂದು ಝಿಯಾವುದ್ದೀನ್ ಅಲಿ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News