ಬೇಡಿಕೆಯ ಕೊರತೆ: ಕುಸಿದ ಚಿನ್ನದ ಬೆಲೆ

Update: 2018-08-02 15:08 GMT

ಹೊಸದಿಲ್ಲಿ, ಆ.2: ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಮಧ್ಯೆಯೇ ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ 365 ರೂ. ಇಳಿಕೆ ಕಂಡು ಹತ್ತು ಗ್ರಾಂ.ಗೆ 30,435 ರೂ.ಗೆ ತಲುಪಿದೆ. ಇದೇ ವೇಳೆ ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಕುಸಿದ ಪರಿಣಾಮ 50 ರೂ. ಇಳಿಕೆ ಕಂಡಿರುವ ಬೆಳ್ಳಿ ಪ್ರತಿ ಕೆ.ಜಿಗೆ 39,000 ರೂ.ಗೆ ತಲುಪಿದೆ.

ನಿರೀಕ್ಷೆಯಂತೆ ಯುಎಸ್ ಫೆಡರಲ್ ರಿಸರ್ವ್ ತನ್ನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಕಾರಣ ಡಾಲರ್ ಬಲಗೊಂಡಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಇಲ್ಲದಂತಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಶೇ.99.9 ಮತ್ತು ಶೇ.99.5 ಶುದ್ಧತೆಯ ಚಿನ್ನದ ಬೆಲೆ 365 ರೂ. ಇಳಿಕೆಯಾಗಿ ಹತ್ತು ಗ್ರಾಂ.ಗೆ ಕ್ರಮವಾಗಿ 30,435 ರೂ. ಹಾಗೂ 30,285ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News