×
Ad

ಜಮ್ಮು ಕಾಶ್ಮೀರ ಹೈಕೋರ್ಟ್‌ಗೆ ಪ್ರಥಮ ಮಹಿಳಾ ಸಿಜೆಯಾಗಿ ಗೀತಾ ಮಿತ್ತಲ್ ಆಯ್ಕೆ

Update: 2018-08-04 20:09 IST

 ಹೊಸದಿಲ್ಲಿ, ಆ.4: ನ್ಯಾ.ಗೀತಾ ಮಿತ್ತಲ್ ಅವರನ್ನು ಜಮ್ಮು-ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ(ಸಿಜೆ)ರನ್ನಾಗಿ ನೇಮಿಸಲಾಗಿದೆ ಎಂದು ಕಾನೂನು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಗೀತಾ ಮಿತ್ತಲ್ ಜಮ್ಮು ಕಾಶ್ಮೀರ ಹೈಕೋರ್ಟ್‌ನ ಮೊದಲ ಮಹಿಳಾ ಸಿಜೆ ಯಾಗಿದ್ದಾರೆ. ಶುಕ್ರವಾರ ಜಮ್ಮು-ಕಾಶ್ಮೀರದ ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಸಿಂಧು ಶರ್ಮ ನೇಮಕಗೊಂಡಿದ್ದರು. ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ದಿಲ್ಲಿ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ರಾಜಸ್ತಾನ ಹೈಕೋರ್ಟ್‌ನ ನ್ಯಾಯಾಧೀಶ ಕಲ್ಪೇಶ್ ಸತ್ಯೇಂದ್ರ ಝವೇರಿ ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದಾರೆ. ಒಡಿಶಾ ಹೈಕೋರ್ಟ್‌ನ ಸಿಜೆ ಆಗಿದ್ದ ವಿನೀತ್ ಸರಣ್ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದಾರೆ.

 ಕೋಲ್ಕತಾ ಹೈಕೋರ್ಟ್‌ನ ನ್ಯಾಯಾಧೀಶ ಅನಿರುದ್ಧ ಬೋಸ್‌ರನ್ನು ಜಾರ್ಖಂಡ್ ಹೈಕೋರ್ಟ್‌ನ ಸಿಜೆ ಆಗಿ ಪದೋನ್ನತಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News