ಈ ದೇಶದ ಮಿಡಿಯುವ ಹೃದಯಗಳ ದನಿ ‘ಮುಲ್ಕ್’

Update: 2018-08-05 11:46 GMT

ದೇಶ ವಿಭಜನೆಯಾಗಿ ಮಾಸದ ಗಾಯಗಳನ್ನು ಉಳಿಸಿಬಿಟ್ಟಿದೆ.ಇನ್ನೂ ದೇಶದೊಳಗೆ ಜನರ ಮನಸ್ಸುಗಳನ್ನು ಧರ್ಮಾಧಾರಿತವಾಗಿ ಒಡೆದಾಳುವ ರಾಜಕೀಯ ಕುತಂತ್ರಕ್ಕೆ ಅಮಾಯಕರು ಮತ್ತೆಮತ್ತೆ ಬಲಿಯಾಗುತ್ತಲೇ ಇದ್ದಾರೆ. ಸಮಾಜದ ಓರೆಕೋರೆಗಳನ್ನು ಗುರುತಿಸಿ ಸೂಕ್ಷ್ಮ ಮನಸ್ಸುಗಳ ಆತ್ಮಾವಲೋಕನಕ್ಕೆ ಕಾರಣವಾಗುವಂತಹ ಸಿನೆಮಾಗಳ ಪೈಕಿ ಈಗಷ್ಟೇ ಬಿಡುಗಡೆಯಾಗಿರುವ ಹಿಂದಿ ಚಲನಚಿತ್ರ ‘ಮುಲ್ಕ್ಕ್’ ಕೂಡಒಂದು. ಸೌಹಾರ್ದ ನೆಲೆಯ ಭಾರತದ ನೆಲ ಇಂದು ದುಷ್ಟರಾಜಕೀಯ ದಾಳಕ್ಕೆ ಸಿಕ್ಕಿ, ಮತಧರ್ಮದ ಹೆಸರಿನಲ್ಲಿಒಡೆದುಛಿದ್ರವಾಗುತ್ತಿದೆ. ಮತೀಯ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಅವರು ಮತ್ತು ನಾವು ಎಂಬ ಭೇದಿಸುವ ಗೆರೆ ಎಳೆಯಲಾಗುತ್ತಿದ್ದು, ಇದೇ ನೆಲದಲ್ಲಿ ಹುಟ್ಟಿ ಬದುಕುತ್ತಿರುವ ಮುಸ್ಲಿಮರಿಗೆ ಭಾರತದಲ್ಲಿ ಅನಾಥ ಪ್ರಜ್ಞೆ ಕಾಡುವಂತೆ ಸಂಚು ರೂಪಿಸಲಾಗುತ್ತಿದೆ. ಮುಸ್ಲಿಮರಲ್ಲಿ ಉಂಟಾಗಿರುವ ಈ ಅಭದ್ರತೆಯನ್ನು ಕೆಲವು ಭಯೋತ್ಪಾದಕ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ಅಷ್ಟೇ ನಿಜ. ಇಂತಹಅಪಾಯಕಾರಿ ಸನ್ನಿವೇಶದಲ್ಲಿ ನೈಜಘಟನೆಯ ಪತ್ರಿಕಾ ವರದಿಯೊಂದನ್ನು ಆಧರಿಸಿ ನಿರ್ಮಿಸಲಾಗಿರುವ ಮನೋಜ್ಞಚಿತ್ರ ‘ಮುಲ್ಕ್ಕ್’.ಭಯೋತ್ಪಾದನೆ ಮನುಷ್ಯ ಎಸಗುವ ಒಂದುಅಪರಾಧವೇ ಹೊರತು ಯಾವುದೇ ಮತ ಧರ್ಮಕ್ಕೆ ಜೋಡಿಸಬಹುದಾದ ಕ್ರಿಯೆಯಲ್ಲ ಎಂದು ಇದು ಸಾರುತ್ತದೆ.
ನೈಜಕತೆಯನ್ನಾಧರಿಸದ್ದೆಂದು ಹೇಳಲಾದ ಚಿತ್ರದಕಥಾಹಂದರವು, ಭಯೋತ್ಪಾದನೆಯ ಒಂದು ಎಳೆಯನ್ನಿರಿಸಿಕೊಂಡು ದೇಶದ ಸಮಕಾಲೀನ ಪರಿಸ್ಥಿತಿಯನ್ನು ಚಿತ್ರಿಸಿದೆ.ಒಂದುಗೌರವಯುತವಾದ ಮುಸಲ್ಮಾನ ಕೂಡು- ಕುಟುಂಬವು ಅನ್ಯಾಯವಾಗಿ ಸಮಾಜ ಮತ್ತು ವ್ಯವಸ್ಥೆಯಿಂದ ಅಪಮಾನ, ಹಿಂಸೆ, ಸಾವು-ನೋವುಗಳಿಗೆ ಗುರಿಯಾಗುವುದನ್ನು ಪ್ರತಿಬಿಂಬಿಸುವ ‘ಮುಲ್ಕ್ಕ್’, ದೇಶ, ದೇಶಪ್ರೇಮ ಮತ್ತು ಭಯೋತ್ಪಾದನೆಗಳಂತಹ ಅತ್ಯಂತ ಸೂಕ್ಷ್ಮವಿಚಾರಗಳ ಕುರಿತು ಈಗಾಗಲೇ ಎತ್ತಲಾಗಿರುವ ಹಲವು ಮಹತ್ವದ ಪ್ರಶ್ನೆಗಳನ್ನು ವೀಕ್ಷಕರ ಮನಮುಟ್ಟುವಂತೆ ಉತ್ತರಿಸುತ್ತದೆ. ದೇಶದ ಸೌಹಾರ್ದತೆ ಮತ್ತು ಸಾರ್ವಭೌಮತೆಗೆ ಇಂದು ಕಂಟಕವಾಗಿರುವ ಹುಸಿ ದೇಶಭಕ್ತಿ ಮತ್ತು ೞಹುಸಿ ‘ದೇಶಭಕ್ತ’ರಿಂದಾಗಿ ಮತೀಯ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು ತಮ್ಮ ರಾಷ್ಟ್ರಪ್ರೇಮವನ್ನು ಸಾಬೀತುಪಡಿಸಬೇಕೆಂದು ಏಳುತ್ತಿರುವ ಒತ್ತಡಕ್ಕೆ ಈ ಚಿತ್ರ ಸಮರ್ಥವಾಗಿ ಉತ್ತರ ನೀಡಲು ಯತ್ನಿಸಿದೆ. ವಿನಾಶಕಾರಿ ಹಿಂದುತ್ವದ ಬೆಳವಣಿಗೆಯಿಂದಾಗಿ ಭಾರತದ ಮುಸ್ಲಿಮರು ಅಭದ್ರತೆ, ಆತಂಕಗಳನ್ನೇ ಉಸಿರಾಡುತ್ತಿರುವುದು ಇಂದಿನ ಘೋರವಾಸ್ತವ. ಭಯೋತ್ಪಾದಕರು ಇದರ ದುರ್ಲಾಭ ಪಡೆದು ಅಮಾಯಕ ಮುಸ್ಲಿಮ್ ಯುವಕರನ್ನು ಹಾದಿತಪ್ಪಿಸುವ ಸಂದರ್ಭಗಳು ಇಲ್ಲವೆಂದಲ್ಲ. ಇಂತಹ ಒಂದು ಘಟನೆ ಈ ಚಿತ್ರದಲ್ಲಿ ಬಿಂಬಿತವಾಗಿದೆ. ಓರ್ವ ಮುಸ್ಲಿಮ್ ಕುಟುಂಬದ ಹಿರಿಯವ್ಯಕ್ತಿಖ್ಯಾತ ವಕೀಲನಾಗಿದ್ದು ಸ್ಥಳೀಯವಾಗಿ ಗೌರವಾದರಗಳನ್ನು ಸಂಪಾದಿಸಿರುತ್ತಾನೆ. ತನ್ನ ಕುಟುಂಬದ ಒಬ್ಬಯುವಕ ಮನೆಯೊಳಗೆ ಯಾರಅರಿವಿಗೂ ಬಾರದಂತೆ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಇಡೀ ಕುಟುಂಬಕ್ಕೆ ತೀವ್ರ ಆಘಾತ ಉಂಟು ಮಾಡುತ್ತದೆ. ಇಡೀಕುಟುಂಬ ಭಯೋತ್ಪಾದ ಕಕೃತ್ಯವನ್ನು ತೀಕ್ಷ್ಣವಾಗಿ ಪ್ರತಿರೋಧಿಸಿ ಅವನ ಶವವನ್ನೂ ತಿರಸ್ಕರಿಸುತ್ತದೆ. ಇದೇ ಬೆಳವಣಿಗೆಯಿಂದ ದುಃಖತಪ್ತರಾದ ಕುಟುಂಬಸ್ಥರು ಅವನ ಸಂಬಂಧವನ್ನೂ ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಹೀಗಿದ್ದಾಗ್ಯೂ ಆ ಕುಟುಂಬವನ್ನು ಕಪ್ಪುಪಟ್ಟಿಗೆ ಸೇರಿಸುವ ಸಮಾಜ ಈ ಅಮಾಯಕರಿಗೆ ಕೊಡುವ ನೋವು ಅಷ್ಟಿಷ್ಟಲ್ಲ. ಇನ್ನೊಂದು ಮತಧರ್ಮವನ್ನು ಅನುಸರಿಸುತ್ತಾರೆಂದೂ, ಬೇರೆದೇವರನ್ನು ಪ್ರಾರ್ಥಿಸುತ್ತಾರೆಂದೂ, ಕುಟುಂಬದ ಒಬ್ಬ ಭಯೋತ್ಪಾದನೆಯ ಅಪರಾಧಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಇಡೀ ಕುಟುಂಬಸ್ಥರನ್ನು ಅಪರಾಧಿಗಳಂತೆ ಕಂಡು, ದೇಶದ್ರೋಹಿಗಳೆಂದು ಘೋಷಿಸಿ ಇದೇ ಮಣ್ಣಲ್ಲಿ ಹುಟ್ಟಿ ಬಾಳಿ ಬದುಕಿದವರಿಗೆ ‘ಪಾಕಿಸ್ತಾನಕ್ಕೆ ಹೊರಟುಹೋಗಿ’ಎನ್ನುವ ಕೂಗುಗಳು ಸಂವೇದನೆಯುಳ್ಳ ವೀಕ್ಷಕರ ಮನಸ್ಸುಗಳನ್ನು ಘಾಸಿಗೊಳಿಸದಿರದು. ಭಾರತದಲ್ಲಿ ವ್ಯಾಪಕಗೊಳ್ಳುತ್ತಿರುವ ಇಂತಹ ರೋಗಗ್ರಸ್ತ ಮನಸ್ಥಿತಿಗೆ ‘ಮುಲ್ಕ್’ ಉತ್ತರ ನೀಡುತ್ತದೆ. ಹಿರಿಯ ಮುಸ್ಲಿಮ್ ವಕೀಲನಾಗಿ ಅಭಿನಯಿಸಿರುವ ರಿಶಿ ಕಪೂರ್ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರು ತೋರುವ ಆತಂಕ, ಆಕ್ರೋಶ, ದಿಗ್ಭ್ರಮೆ, ನಾಡಿನ ಬಗೆಗಿನ ಪ್ರೇಮ, ದೃಡತೆ ಇಂದು ಪ್ರತಿಯೊಬ್ಬ ಭಾರತೀಯ ಮುಸಲ್ಮಾನನೊಳಗೆ ಕಾಡುವ ಅನಿಶ್ಚಿತತೆಯ ಪ್ರಶ್ನೆಗಳಿಗೆ ಹಾಗೂ ‘ನನ್ನದುದೇಶ, ಈ ದೇಶ ನಮ್ಮದು’ ಎಂಬ ಆಂತರ್ಯದ ಭಾವಕ್ಕೆ ತೋರುವ ಅಭಿವ್ಯಕ್ತಿ ಎಂದರೆ ತಪ್ಪಲ್ಲ. ಕಪೂರ್ ಈ ಕಾರ್ಯವನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ.
ಸಮಾಜದಲ್ಲಿ ಮತಧರ್ಮದ ಆಧಾರದಲ್ಲಿ ‘ಅವರು’ ಮತ್ತು ‘ನಾವು’ ಎಂದು ಗುರುತಿಸಿ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಭೇದ ಎಣಿಸಲಾಗುತ್ತಿದ್ದು, ಅದು ಇತ್ತೀಚೆಗೆ ತೀಕ್ಷ್ಣ ಗೊಂಡಿರುವ ಪ್ರಕ್ರಿಯೆ ಎಂಬುದನ್ನು ಚಿತ್ರ ಸೂಕ್ಷ್ಮವಾಗಿ ಬಿಂಬಿಸುತ್ತದೆ.ಅದೇ ಕುಟುಂಬದೊಳಗೆ ಅಂತರ್ಧರ್ಮೀಯ ವಿವಾಹವನ್ನು ಪ್ರೀತಿಯಿಂದ ಸ್ವೀಕರಿಸಿರುವುದನ್ನು ಕಾಣಬಹುದಾಗಿದ್ದು, ಆ ಪ್ರದೇಶದಲ್ಲಿ ಮತೀಯವಾದಿ (ಇಲ್ಲಿ ಹಿಂದುತ್ವವಾದಿ ಎಂದು ಅರ್ಥೈಸಿಕೊಳ್ಳಬೇಕು) ಶಕ್ತಿಗಳು ಬೆಳೆಯುವ ವರೆಗೂ ಸಮಾಜದಲ್ಲಿ ಇದ್ದ ಅನ್ಯೋನ್ಯತೆ, ಸೌಹಾರ್ದ ಮನಸ್ಥಿತಿಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮತೀಯವಾದ ಮೊಳಕೆಯೊಡೆದು ಹೆಮ್ಮರವಾಗುವ ಸ್ಥಿತ್ಯಂತರದ ಸಂದರ್ಭವನ್ನೂ ಸಾಂಕೇತಿಕವಾಗಿ ಸೂಚಿಸುತ್ತಾರೆ. ‘ಮುಲ್ಕ್ಕ್’ ಚಿತ್ರದಲ್ಲಿ ಸಂಕೇತಗಳು ಮತ್ತು ಸಂಭಾಷಣೆಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಸಂತೋಷಕೂಟದಲ್ಲಿ ಮುಸಲ್ಮಾನ ಮಾವನಿಗೆ ಹಿಂದೂ ಸೊಸೆ ಹಣೆಗೆ ಕುಂಕುಮ ಹಚ್ಚುವ ಪ್ರಸಂಗವಾಗಲೀ ಸ್ಥಳೀಯ ಹಿಂದೂ ಕುಟುಂಬಗಳು ಇದೇ ಮುಸಲ್ಮಾನ ಕುಟುಂಬದ ಔತಣಕೂಟದಲ್ಲಿ ಮನಸ್ಪೂರ್ವಕವಾಗಿ ಭಾಗವಹಿಸುವ ದೃಶ್ಯವಾಗಲೀ, ಇಂತಹ ಅನೇಕ ಸಣ್ಣಪುಟ್ಟ ಆದರೂ ಮನಸ್ಸಿಗೆ ನಾಟುವ ಅರ್ಥಗರ್ಭಿತ ಸನ್ನಿವೇಶಗಳು ಸಾಕಷ್ಟಿವೆ. ಮೊಹಲ್ಲಾದಲ್ಲಿ ಮತೀಯವಾದ ಅಂಕುರವಾಗುವುದನ್ನು ಅತ್ಯಂತ ಸೂಕ್ಷ್ಮವಾಗಿ, ಪ್ರಭಾವಶಾಲಿಯಾಗಿ ಪರಿಚಯಿಸುತ್ತಾರೆ, ನಿರ್ದೇಶಕರು.
ಭಯೋತ್ಪಾದಕರೆಂದರೆ ದಾಡಿ ಬಿಟ್ಟವರು, ಮುಸ್ಲಿಮರೆಂದರೆ ಭಯೋತ್ಪಾದಕರು ಎಂಬ ಮಿಥ್ಯೆಯನ್ನು ಹಬ್ಬಿಸುತ್ತಿರುವ ಹಿಂದುತ್ವವಾದಿಗಳ ವಾದದ ವಿರುದ್ಧ ‘ಮುಲ್ಕ್ಕ್’ ಹಲವು ಆಯಾಮಗಳನ್ನು ಒದಗಿಸಿದೆ.ಈ ಸುಳ್ಳಿಗೆ ಜನಸಾಮಾನ್ಯರಷ್ಟೇ ಬಲಿಯಾಗದೆಇಡೀ ವ್ಯವಸ್ಥೆ ಕೈ ಜೋಡಿಸುತ್ತಿದೆ. ಪೊಲೀಸರು, ನ್ಯಾಯಾಲಯ, ವಕೀಲರು ಸೇರಿದಂತೆಎಲ್ಲರೂಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿಗಳ, ಭಯೋತ್ಪಾದಕರ ಸ್ಥಾನದಲ್ಲಿ ನಿಲ್ಲಿಸಿ ನೋಡುವ ಪೂರ್ವಗ್ರಹಪೀಡಿತ ಮನಸ್ಥಿತಿಯನ್ನು ಬಿಚ್ಚಿಡುತ್ತದೆ ‘ಮುಲ್ಕ್’.ಇಷ್ಟಾದರೂ ಇಡೀಚಿತ್ರದಾದ್ಯಂತ ಕಗ್ಗತ್ತಲ ನಡುವೆ ಬೆಳಕಿನ ಕಿರಣಗಳನ್ನು ಆಗಾಗ ಮೂಡಿಸುತ್ತಲೇ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಚಿತ್ರವನ್ನು ಆಶಾದಾಯಕವಾಗಿ ನಿರ್ಮಿಸಲಾಗಿರುವುದು ಈ ಚಿತ್ರದ ಹೆಗ್ಗಳಿಕೆ.ಇದೇ ಈ ನೆಲದ ಸಾರ ಮತ್ತು ಸೌಂದರ್ಯವೂ ಹೌದು. ಬುದ್ಧ ಬಸವ, ಕಬೀರ, ನಾನಕ, ಮುಂತಾದವರ ನಾಡಿನಲ್ಲ್ಲಿ ಸೌಹಾರ್ದ ಸೆಲೆಗಳು ಬತ್ತಲು ಸಾಧ್ಯವೇ? ಇಲ್ಲ. ಭಯೋತ್ಪಾದನೆ ಎಂದರೇನು ಎಂದು ಪ್ರಶ್ನಿಸುವ ಸಿನೆಮಾ ಕೇವಲ ಕೊಲೆ ಮಾಡುವುದನ್ನು ಅದರ ಸಾಲಿನಲ್ಲಿ ಸೇರಿಸುವಿರೇ, ಇಲ್ಲಾ ದಲಿತರನ್ನು ದೂರವಿಡುವ ಅಸ್ಪಶ್ಯತೆಯನ್ನು ಏನೆನ್ನುತ್ತೀರಾ, ನೆಲ-ಜಲ ಉಳಿಸಲು ಹೋರಾಡುತ್ತಿರುವ ಆದಿವಾಸಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಏನನ್ನಬೇಕು, ಇತ್ಯಾದಿ ಪ್ರಶ್ನೆಗಳ ಮಳೆ ಸುರಿಸಿ ಸಾಕ್ಷಿಪ್ರಜ್ಞೆ ಉಳ್ಳ ವೀಕ್ಷಕರನ್ನು ಆಳವಾದ ಆಲೋಚನೆಗೆ ಇಳಿಸುತ್ತದೆ. ನ್ಯಾಯಾಲಯದಲ್ಲಿ ನಡೆಯುವ ಪ್ರಸಂಗಗಳು ಕುತೂಹಲ ಮೂಡಿಸುವಂತಹದ್ದು, ಆದರೆ ಅದನ್ನು ಕೇವಲ ಚಲನಚಿತ್ರವೆಂದಷ್ಟೇ ವೀಕ್ಷಿಸಬೇಕು! ಕೂಡುಕುಟುಂಬದ ಮುಸ್ಲಿಮರ ಮನೆಗಳನ್ನು ಭಯೋತ್ಪಾದಕರ ‘ಅಡ್ಡೆ’ಗಳೆಂದು ಪರಿಗಣಿಸುವ ಸರರ್ಕಾರಿ ವಕೀಲರ ಮನಸ್ಥಿತಿ ಊಹೆಗೂ ನಿಲುಕದ್ದು. ವ್ಯವಸ್ಥೆಯೂ ಮತೀಯವಾದದತ್ತ ಕ್ರೂರವಾಗಿ ವಾಲುತ್ತಿರುವುದು ಈ ದೇಶದ ಅತಿ ದೊಡ್ಡ ಅಪಾಯ. ಹಿರಿಯ ಮುಸ್ಲಿಮ್ ವಕೀಲ ಒಂದು ಸಂದರ್ಭದಲ್ಲಿ ಆಡುವ ಮಾತು ನನಗೆ ಆಪ್ಯಾಯ ಮಾನವಾಗಿ ಕಂಡಿತು ‘ನನ್ನ ಮನೆಗೆ ಸ್ವಾಗತ ಮಾಡುವ ಹಕ್ಕು ಯಾರಿಗಿದೆ?’ ಎಂದು. ಇದು ಕೇವಲ ನಾಲ್ಕು ಗೋಡೆಗಳ ಮನೆಯಲ್ಲ, ‘ಮುಲ್ಕ್ಕ್’ ಗೆ ಸಂಬಂಧಿಸಿದ್ದು ಎಂಬುದು ಇದರ ಅಂತಃಸತ್ವ.‘ಮುಲ್ಕ್ಕ್’ ಎಂದರೆ ದೇಶ, ನಾಡು, ನೆಲ. ಱಈ ದೇಶ ಬಿಟ್ಟು ನಾವು ಏಕೆ ಪಾಕಿಸ್ತಾನಕ್ಕೆ ಹೋಗಬೇಕು? ಇದು ನಮ್ಮ ನೆಲ, ನಾನು ಇಲ್ಲೇಇದ್ದು ಹೋರಾಡುತ್ತೇನೆ. ‘ಎಂಬ ಸಂಭಾಷಣೆ ಕೇವಲ ಮಾತಲ್ಲ, ಈ ನಾಡಿನ ಮುಸಲ್ಮಾನರ ಅಂತಃಕರಣದ ನುಡಿಗಳು. ಹಿಂದೂ ಸೊಸೆ ವಕೀಲೆಯಾಗಿ ಬಂದು ನಿರಪರಾಧಿ ಮುಸ್ಲಿಮ್ ಕುಟುಂಬದ ಪರ ವಾದಿಸಿ ಅವರನ್ನು ಅಪರಾಧ ಸ್ಥಾನದಿಂದ ಬಿಡುಗಡೆಗೊಳಿಸುವುದು ಸಮಾಜಕ್ಕೆ ಒಂದು ಮಹತ್ತರ ಸಂದೇಶ ಸಾರುತ್ತದೆ’.ನಾನು ಹಿಂದೂಅಲ್ಲ, ಮುಸ್ಲಿಮ್ ಅಲ್ಲ, ಈ ಮನೆಯ ಸೊಸೆಱ ಎಂದು ಸ್ಫಟಿಕದಷ್ಟೇ ಸ್ಪಷ್ಟವಾಗಿ ಹೇಳುವ ಅವಳ ಮಾತುಗಳು ಅತ್ಯಂತ ಮಾರ್ಮಿಕವಾಗಿವೆ. ಇಂದು ಪ್ರಜ್ಞಾವಂತ ಭಾರತೀಯರೆಲ್ಲರೂ ಸೇರಿ ಈ ನಿರಪರಾಧಿ ಸಮುದಾಯವನ್ನು ೞಅಪರಾಧಿ ಭಾವೞದಿಂದ, ಪೂರ್ವಾಗ್ರಹಗಳಿಂದ ಮುಕ್ತಗೊಳಿಸಬೇಕಿದೆ. ತೋರ್ಪಡಿಕೆಯ ದೇಶಪ್ರೇಮ ಹುಸಿಯೇ ಹೌದು; ದೇಶಪ್ರೇಮವಿರುವುದು ಎದೆಯಾಳದೊಳಗೆ, ಅದನ್ನು ಯಾರೂ ಸಾಬೀತು ಪಡಿಸಲೂ ಆಗದು, ಬಗೆದು ನೋಡಲೂಆಗದು.
 ಮುಸ್ಲಿಮರ ಬಡತನ, ಅನಕ್ಷರತೆ, ಹಿಂದುಳಿಯುವಿಕೆ ಸಮಾಜಕ್ಕೆ ನಗು ತರುವ ವಿಷಯವೇಎಂದು ನೋವಿನಿಂದ ಕೇಳುವ ಪ್ರಶ್ನೆಗಳು ಮನಸ್ಸಿಗೆ ನಾಟುತ್ತವೆ. ಅಂತಿಮವಾಗಿ, ಅಂಚಿನಲ್ಲಿರುವ ಜನಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕೆಂದು ನ್ಯಾಯಾಧೀಶರ ಮೂಲಕ ನಿಖರವಾಗಿ ಉಚ್ಚರಿಸುವಂತೆ ಚಿತ್ರದ ಹಂದರವನ್ನು ರೂಪಿಸಿರುವುದರ ಹಿಂದೆ ಮಹತ್ತರ ಆಶಯ ವ್ಯಕ್ತವಾಗುತ್ತದೆ. ‘ಹಮ್‌ಇಸ್ ಮುಲ್ಕ್’್ಕ ಕೋ ಬನಾತೆ ಹೈ ಎಂಬ ನಿಶ್ಚಿತ ನುಡಿಗಳು ದೇಶ ಎಂದರೆ ಗಡಿಯಲ್ಲ, ಅದರೊಳಗಿನ ಜನರುಎಂಬುದನ್ನು ಪುನಃ ನೆನಪಿಸುತ್ತವೆ. ಭಾರತದಗರ್ಭದಲ್ಲೇ ಟಿಸಿಲೊಡೆದ ನಮ್ಮ ನೆರೆರಾಷ್ಟ್ರ ಪಾಕಿಸ್ತಾನದ ಹೆಸರು ಉಚ್ಚರಿಸುವುದೇ ದೇಶದ್ರೋಹ ಎಂಬಂತೆ ಕಿಡಿಗೇಡಿಗಳು ಭಾರತದಲ್ಲಿ ವ್ಯವಸ್ಥಿತವಾಗಿ ವಿಷ ಬಿತ್ತುತ್ತಿರುವುದರ ಹಿಂದಿನ ಅಪ್ರಯೋಜಕತೆಯನ್ನು ಅತಿ ನಾಜೂಕಾಗಿ ಚಿತ್ರಿಸಲಾಗಿದೆ. ದೇಶದ ಪ್ರಸ್ತುತ ಪೊಲೀಸ್ ವ್ಯವಸ್ಥೆಯನ್ನುಯಥಾವತ್ತಾಗಿ ಬಿಂಬಿಸಿರುವ ‘ಮುಲ್ಕ್ಕ್’ ಅಮಾಯಕ ಮುಸ್ಲಿಮ್ ಕುಟುಂಬದ ಮೇಲೆ ಮತೀಯವಾದಿಗಳು ದಾಳಿಗೈದಾಗ ದೂರುದಾಖಲಿಸಲು ನಿರಾಕರಿಸುವುದು ಇಂದಿನ ವಿಷಮಯ ಸಾಮಾಜಿಕ ಪರಿಸ್ಥಿತಿಯಲ್ಲಿ ತೀರಾ ಸಹಜವಾಗಿಯೇತೋರುತ್ತದೆ. ಭಯೋತ್ಪಾದನೆಯಲ್ಲಿ ತೊಡಗಿರುವ ಯುವಕನ ಅಡಗು ತಾಣವನ್ನು ಅರಿತ ಪೊಲೀಸರು ಕಾನೂನಾತ್ಮಕವಾಗಿ ಅವನನ್ನು ಜೀವಂತವಾಗಿ ಹಿಡಿದುತಂದು ನ್ಯಾಯಾಲಯದ ಮುಂದೆ ಒಪ್ಪಿಸಲು ಅವಕಾಶವಿದ್ದರೂ ಸಹ, ಮೇಲಿನ ಅಧಿಕಾರಿಗಳ ಆಜ್ಞೆಯನ್ನೂ ಮೀರಿ ತನಿಖಾಧಿಕಾರಿ ಅವನನ್ನು ವೈಯಕ್ತಿಕ ಪೂರ್ವಗ್ರಹಗಳಿಂದ ಎನ್‌ಕೌಂಟರ್ ಮಾಡುವುದೂ ಅಷ್ಟೇ ನೈಜವಾಗಿ ಕಾಣುತ್ತದೆ. ಅಮಾಯಕ ಮುಸ್ಲಿಮರ ಮೇಲೆ ಕಲ್ಲೆಸೆಯುವುದು ಮತ್ತವರನ್ನುತಮ್ಮ ನೆಲದಲ್ಲಿ ಬದುಕಲು ಬಿಡದಿರುವ ಕೃತ್ಯಗಳು ಕಾನೂನು ಸುವ್ಯವಸ್ಥೆಗೆ ಸೇರಿದ್ದೇ ಎಂದು ಆಕ್ರೋಶಭರಿತನಾಗಿ ಬಾಧಿತ ಹಿರಿಯ ಮುಸಲ್ಮಾನನ ಪಾತ್ರ ಕೇಳುವಾಗ ಭಾರತದ ಎಲ್ಲಾ ಸಂವೇದನಾಶೀಲ ನಾಗರಿಕರು ತಲೆ ತಗ್ಗಿಸುವಂತಾಗುತ್ತದೆ.
    ಒಟ್ಟಾರೆ ಇಡೀ ಸಮಾಜ ಮತ್ತುದೇಶ ಮುಸಲ್ಮಾನರನ್ನು ಭಯೋತ್ಪಾದಕರೆಂದು ಕಾಣುವಂತೆ ಹಿಂದುತ್ವವಾದಿಗಳು ಪ್ರಚೋದಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಒಂದು ಆತಂಕಕಾರಿಯಾದ ಸೂಕ್ಷ್ಮ ವಿಷಯವನ್ನು ಆಶಾದಾಯಕವಾಗಿ ಮತ್ತು ಸಮರ್ಥವಾಗಿ ಜನರಿಗೆ ತಲುಪಿಸುವ ಯತ್ನ ‘ಮುಲ್ಕ್ಕ್’ ಚಿತ್ರದ ನಿರ್ದೇಶಕರದ್ದಾಗಿದೆ ಎಂದು ಹೇಳಬಹುದು. ಚಿತ್ರೀಕರಣದಲ್ಲಿ ಮತ್ತು ಅದರ ಹಿಂದೆ ದುಡಿದಿರುವ ನೂರಾರು ತಂತ್ರಜ್ಞರು ‘ಮುಲ್ಕ್’್ಕನ ಯಶಸ್ಸಿಗೆ ಕಾರಣರಾಗಿರುತ್ತಾರೆ. ಇದು ವಾಣಿಜ್ಯ ಮತ್ತು ಕಲಾ ಸಿನೆಮಾಗಳ ನಡುವೆ ನಿಲ್ಲುವಂತಹದ್ದು. ಸೀಮಿತವಾದ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ. ಚಲನಚಿತ್ರಎಲ್ಲೂ ೞಶುಷ್ಕತೆಱಯ ಭಾವವನ್ನು ಕಲ್ಪಿಸುವುದಿಲ್ಲ. ಪ್ರತಿ ದೃಶ್ಯವೂ ತನ್ನೊಡನೆ ಕುತೂಹಲವನ್ನು ಒಯ್ಯುತ್ತದೆ.ಈ ಚಿತ್ರದ ಸಂದೇಶವೇ ಎಲ್ಲಕ್ಕಿಂತಲೂ ಹೆಚ್ಚು ತೀವ್ರತೆಯಿಂದ ಕೂಡಿದೆ. ‘ವಕ್ತ್ ಕೇ ಸಾಥ್ ರಿವಾಜ್ ಭೀ ಬದಲ್ನಾ ಹೈ’ (ಕಾಲಕ್ಕೆ ತಕ್ಕಂತೆ ಆಚರಣೆಗಳೂ ಬದಲಾಗಬೇಕು) ಎಂದು ಹೇಳುವುದರ ಮೂಲಕವೇ ಈ ಸಿನಿಮಾ ಪ್ರಗತಿಯ ಹಾದಿಯನ್ನು ತುಳಿಯುತ್ತದೆ. ಇಸ್ಲಾಮ್ ಎಂದರೆ ಭಯೋತ್ಪಾದನೆಯಲ್ಲ, ಭಯೋತ್ಪಾದನೆಗೂ ಮತ ಧರ್ಮಕ್ಕೂ ಸಂಬಂಧ ಕಲ್ಪಿಸಬೇಡಿ, ಭಯೋತ್ಪಾದನೆ ರಾಜಕಾರಣ, ಹಣ ಮತ್ತು ಅಧಿಕಾರಕ್ಕೆ ಸಂಬಂಧಿಸಿದ್ದು ಎಂಬುದೂ ‘ಮುಲ್ಕ್ಕ್’ನ ಸಂದೇಶವಾಗಿರುತ್ತದೆ. ‘ಮುಲ್ಕ್ಕ್’ ಸೌಹಾರ್ದ ನೆಲದ ಮಾತಾಗಿದೆ; ಈ ದೇಶದ ಮಿಡಿಯುವ ಹೃದಯಗಳ ದನಿಯಾಗಿದೆ. ನಮೊಳಗಿನ ನಮ್ಮನ್ನು ಕಾಡುವ ನೋವಿನ ಹಾಡು ‘ಮುಲ್ಕ್ಕ್’.

 

Writer - ಜ್ಯೋತಿ ಎ.

contributor

Editor - ಜ್ಯೋತಿ ಎ.

contributor

Similar News