ಮುಝಪ್ಫರ್‌ಪುರ ಆಶ್ರಯ ಮನೆ ಅತ್ಯಾಚಾರ ಪ್ರಕರಣ: ಐವರು ಅಧಿಕಾರಿಗಳ ಅಮಾನತು

Update: 2018-08-05 15:08 GMT

ಪಾಟ್ನಾ, ಆ. 5: ಮುಝಪ್ಫರ್‌ಪುರದಲ್ಲಿರುವ ರಾಜ್ಯ ಅನುದಾನದ ಆಶ್ರಯ ಮನೆಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದ ಬಳಿಕ ‘ಕರ್ತವ್ಯ ನಿರಾಕರಣೆ ಹಾಗೂ ನಿರ್ಲಕ್ಷ’ದ ಆರೋಪದಲ್ಲಿ ಸಮಾಜ ಕಲ್ಯಾಣ ಇಲಾಖೆಯ 6 ಮಂದಿ ಅಧಿಕಾರಿಗಳು ಅಮಾನತು ಮಾಡಲಾಗಿದೆ.

 ಅಮಾನತಿಗೆ ಸಂಬಂಧಿಸಿ ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಮುಝಾಪ್ಫರ್‌ಪುರ, ಮುಂಗೇರ್, ಅರಾರಿಯಾ, ಮಧುಬನಿ, ಭಾಗಲ್ಪುರ ಹಾಗೂ ಭೋಜಪುರ ಜಿಲ್ಲೆಗಳ ಘಟಕದ ಉಪ ನಿರ್ದೇಶಕರನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳ ಆಶ್ರಯ ಮನೆಗಳಲ್ಲಿ ಹಲ್ಲೆ, ಅಸಭ್ಯ ನಡವಳಿಕೆ ಹಾಗೂ ಇತರ ಅನಪೇಕ್ಷಿತ ಚಟುವಟಿಕೆಗಳಿಗೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದ ಆರೋಪದಲ್ಲಿ ಕೂಡಲೇ ಜಾರಿಗೆ ಬರುವಂತೆ ಈ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News