ಜಪಾನೀಯರನ್ನು ಅನುಸರಿಸಿದ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು

Update: 2018-08-09 05:35 GMT

ಪಲ್ಲಿಕಲ್, ಆ.8: ಜಪಾನ್ ಫುಟ್ಬಾಲ್ ಅಭಿಮಾನಿಗಳು ರಶ್ಯದಲ್ಲಿ ನಡೆದ ಫಿಫಾ ವಿಶ್ವಕಪ್ ವೇಳೆ ತಮ್ಮ ತಂಡ ಆಡಿದ ಪಂದ್ಯ ಕೊನೆಗೊಂಡ ಬಳಿಕ ಸ್ಟೇಡಿಯಂನ್ನು ಸ್ವಚ್ಛಗೊಳಿಸಿಯೇ ಹೋಗುತ್ತಿದ್ದರು. ಜಪಾನ್ ತಂಡ ವಿಶ್ವಕಪ್‌ನ ಅಂತಿಮ-16ರ ಸುತ್ತಿನಲ್ಲಿ ಬೆಲ್ಜಿಯಂ ವಿರುದ್ಧ ಆಘಾತಕಾರಿ ಸೋಲನುಭವಿಸಿ ಕೂಟದಿಂದ ಹೊರ ನಡೆದಿತ್ತು. ನಾಕೌಟ್ ಹಂತದಲ್ಲಿ ಬೆಲ್ಜಿಯಂ ವಿರುದ್ಧ ಜಪಾನ್ ತಂಡ ಸೋತ ಹೊರತಾಗಿಯೂ ಜಪಾನೀಯರು ರೊಸ್ಟೊವ್-ಆನ್-ಡಾನ್‌ನಲ್ಲಿ ನಡೆದಿದ್ದ ಪಂದ್ಯದ ಬಳಿಕ ಸ್ಟೇಡಿಯಂನ್ನು ಸ್ವಚ್ಛಗೊಳಿಸಿ ವಿಶ್ವದ ಎಲ್ಲ ಫುಟ್ಬಾಲ್ ಅಭಿಮಾನಿಗಳಿಗೆ ಒಂದು ಮಾದರಿಯಾಗಿದ್ದರು. ಜಪಾನೀಯರ ಸ್ವಚ್ಛತೆಯ ಬಗೆಗಿನ ಕಾಳಜಿಯು ಶ್ರೀಲಂಕಾರನ್ನು ಸೆಳೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಮಾನಿಗಳು ದಕ್ಷಿಣ ಆಫ್ರಿಕ ವಿರುದ್ಧ ರವಿವಾರ ನಡೆದ ಮೂರನೇ ಏಕದಿನ ಪಂದ್ಯದ ಬಳಿಕ ತಮ್ಮ ತಂಡ 78 ರನ್‌ನಿಂದ ಸೋತ ಬಳಿಕ ಸ್ಟೇಡಿಯಂನಲ್ಲಿದ್ದ ಖಾಲಿ ಬಾಟಲಿಗಳು ಹಾಗೂ ಕಸ-ಕಡ್ಡಿಯನ್ನು ತೆಗೆದು ಕ್ರಿಕೆಟ್ ಅಭಿಮಾನಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಶ್ರೀಲಂಕಾ 3ನೇ ಪಂದ್ಯವನ್ನು ಸೋತು ಸರಣಿಯನ್ನು ಕಳೆದುಕೊಂಡರೂ ತಾಳ್ಮೆ ಕಳೆದುಕೊಳ್ಳದ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂ ಸ್ವಚ್ಛಗೊಳಿಸಿದ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪೋಸ್ಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News