ಟ್ರಂಪ್ ವಿರೋಧಿಸುತ್ತಿರುವ ಪ್ರಕ್ರಿಯೆಯಡಿ ಮೆಲಾನಿಯ ಟ್ರಂಪ್ ಹೆತ್ತವರಿಗೆ ಅಮೆರಿಕ ಪೌರತ್ವ !

Update: 2018-08-10 16:29 GMT

ನ್ಯೂಯಾರ್ಕ್, ಆ. 10: ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ಸಮಾರಂಭವೊಂದರಲ್ಲಿ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರ ಹೆತ್ತವರು ಒಂದು ವರ್ಷ ಅವಧಿಯ ವಲಸೆ ಪ್ರಕ್ರಿಯೆಯನ್ನು ಪೂರೈಸಿ ಅಮೆರಿಕದ ಪ್ರಜೆಗಳಾದರು.

 ವಿಶೇಷವೆಂದರೆ, ವಿದೇಶಿಯರು ಅಮೆರಿಕದ ಪ್ರಜೆಗಳಾಗುವ ಯಾವ ಪ್ರಕ್ರಿಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿಸುತ್ತಿದ್ದಾರೋ, ಅದೇ ಪ್ರಕ್ರಿಯೆಯ ಮೂಲಕ ಅವರ ಮಾವ ಮತ್ತು ಅತ್ತೆ ಅಮೆರಿಕ ಪ್ರಜೆಗಳಾಗಿದ್ದಾರೆ!

  ಅಮೆರಿಕದ ಪ್ರಜೆಗಳು ತಮ್ಮ ಹೆತ್ತವರು ಮತ್ತು ಇತರ ಸಂಬಂಧಿಗಳನ್ನು ಅಮೆರಿಕದ ಪ್ರಜೆಗಳಾಗಿ ಪ್ರಾಯೋಜಿಸುವುದನ್ನು ನಿಷೇಧಿಸುವ ನೂತನ ಕಾನೂನುಗಳಿಗಾಗಿ ಟ್ರಂಪ್ ಹೋರಾಡುತ್ತಿದ್ದಾರೆ.

ಟ್ರಂಪ್‌ರ ಪತ್ನಿ ಮೆಲಾನಿಯಾ ಟ್ರಂಪ್‌ರ ಹೆತ್ತವರಾದ ವಿಕ್ಟರ್ ಮತ್ತು ಅಮಲಿಜಾ ನಾವ್ಸ್ ತಮ್ಮ ದೇಶ ಸ್ಲೊವೇನಿಯವನ್ನು ತೊರೆದ ಬಳಿಕ, ಅಮೆರಿಕದಲ್ಲಿ ಕಾನೂನುಬದ್ಧ ಖಾಯಂ ನಿವಾಸಿಗಳಾಗಿ ವಾಸಿಸುತ್ತಿದ್ದರು.

ಗುರುವಾರ ನಡೆದ ಸಮಾರಂಭದಲ್ಲಿ ತನ್ನ ಕಕ್ಷಿದಾರರು ಅಮೆರಿಕ ಪೌರತ್ವದ ಪ್ರಮಾಣ ವಚನವನ್ನು ಸ್ವೀಕರಿಸಿದರು ಎಂದು ಅವರ ವಕೀಲ ಮೈಕಲ್ ವೈಲ್ಡ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News