ಸಿರಿಯ: 2017ರಲ್ಲಿ 68,000 ಮಂದಿ ಸಾವು

Update: 2018-08-10 16:54 GMT

ಡಮಾಸ್ಕಸ್, ಆ. 10: ಯುದ್ಧಗ್ರಸ್ತ ಸಿರಿಯದಲ್ಲಿ 2017ರಲ್ಲಿ 68,000 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ನಾಗರಿಕ ದಾಖಲೆಗಳು ಹೇಳುತ್ತಿವೆ.

‘‘ಕಳೆದ ವರ್ಷ 68,000 ಮಂದಿ ಮೃತಪಟ್ಟಿದ್ದಾರೆ ಹಾಗೂ ಈ ವರ್ಷ ಈವರೆಗೆ 32,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ನಾಗರಿಕ ದಾಖಲೆಗಳ ಮುಖ್ಯಸ್ಥ ಅಹ್ಮದ್ ರಾಹಲ್ ಹೇಳಿದ್ದಾರೆ.

ಜೈಲುಗಳಲ್ಲಿರುವ ಬಂಧಿತರನ್ನು ‘ಮೃತಪಟ್ಟವರು’ ಎಂಬುದಾಗಿ ದಾಖಲಿಸಲಾಗುತ್ತಿದೆ ಎಂಬುದಾಗಿ ನಾಗರಿಕ ಹಕ್ಕುಗಳ ಹೋರಾಟಗಾರರು ಆರೋಪಿಸಿದ ಬಳಿಕ ಗುರುವಾರ ಈ ಹೇಳಿಕೆ ಹೊರಬಿದ್ದಿದೆ. ಕೆಲವರು ಜೈಲಿನಲ್ಲಿದ್ದರೂ, ಹಲವು ವರ್ಷಗಳ ಹಿಂದೆ ಅವರು ಸತ್ತಿದ್ದಾರೆ ಎಂಬುದಾಗಿ ತೋರಿಸಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ದೇಶಾದ್ಯಂತ ಸಾವಿರಾರು ಸಿರಿಯನ್ನರನ್ನು ಸರಕಾರಿ ಜೈಲುಗಳಲ್ಲಿ ಇಡಲಾಗಿದೆ ಎಂದು ಆರೋಪಿಸಲಾಗಿದೆ.

ಬಂಧಿತರಿಗೆ ಜೈಲುಗಳಲ್ಲಿ ಹಿಂಸೆ ನೀಡಲಾಗುತ್ತಿದೆ, ಅವರಿಗೆ ನ್ಯಾಯೋಚಿತ ವಿಚಾರಣೆಯನ್ನು ನಿರಾಕರಿಸಲಾಗುತ್ತಿದೆ ಹಾಗೂ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News