ಸೆ.1ರಿಂದ ರೈಲ್ವೆ ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆ ಸೌಲಭ್ಯ ರದ್ದು

Update: 2018-08-11 13:14 GMT

ಹೊಸದಿಲ್ಲಿ,ಆ.11: ರೈಲು ಪ್ರಯಾಣಿಕರು ಸೆ.1ರಿಂದ ಉಚಿತ ಪ್ರಯಾಣ ವಿಮೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

ಉಚಿತ ಪ್ರಯಾಣ ವಿಮೆಯನ್ನು ಸೆ.1ರಿಂದ ನಿಲ್ಲಿಸಲು ಐಆರ್‌ಸಿಟಿಸಿ ನಿರ್ಧರಿಸಿದೆ ಮತ್ತು ಇದು ಐಚ್ಛಿಕವಾಗಿರಲಿದೆ.ಪ್ರಯಾಣ ವಿಮೆ ರಕ್ಷಣೆ ಬೇಕಾದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹಿರಿಯ ರೈಲ್ವೆ ಸಚಿವಾಲಯದ ಅಧಿಕಾರಿಯೋರ್ವರು ಶನಿವಾರ ಇಲ್ಲಿ ತಿಳಿಸಿದರು.

ಪ್ರಯಾಣಿಕರು ಐಆರ್‌ಸಿಟಿಸಿಯ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವಾಗ ತಮಗೆ ಪ್ರಯಾಣ ವಿಮೆ ಬೇಕೇ ಅಥವಾ ಬೇಡವೇ ಎನ್ನುವುದನ್ನು ಆಯ್ಕೆ ಮಾಡಬೇಕಾಗುತ್ತದೆ.

ಐಆರ್‌ಸಿಟಿಸಿಯು ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಪ್ರಯತ್ನವಾಗಿ 2017,ಡಿಸೆಂಬರ್‌ನಿಂದ ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆಯನ್ನು ಒದಗಿಸುತ್ತಿತ್ತು ಎಂದು ಅಧಿಕಾರಿ ತಿಳಿಸಿದರು.

ರೈಲ್ವೆಯು ಈ ಮೊದಲು ಡೆಬಿಟ್ ಕಾರ್ಡ್‌ಗಳ ಮೂಲಕ ಹಣಪಾವತಿ ಮಾಡುವವರಿಗೆ ಟಿಕೆಟ್ ಬುಕಿಂಗ್ ಶುಲ್ಕಗಳನ್ನು ಮನ್ನಾ ಮಾಡಿತ್ತು.

ರೈಲು ಪ್ರಯಾಣದ ಸಂದರ್ಭದಲ್ಲಿ ವ್ಯಕ್ತಿಯು ಮೃತಪಟ್ಟರೆ 10 ಲ.ರೂ., ಅಂಗವಿಕಲನಾದರೆ 7.50 ಲ.ರೂ.,ಗಾಯಗೊಂಡರೆ 2 ಲ.ರೂ. ಮತ್ತು ಶವಗಳನ್ನು ಸಾಗಿಸಲು 10,000 ರೂ.ಗಳ ಗರಿಷ್ಠ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News