ಅಂಬೇಡ್ಕರ್ ಪ್ರತಿಮೆಯನ್ನು ಹಾಲಿನಿಂದ ಶುದ್ಧೀಕರಿಸಿದ ದಲಿತ ವಕೀಲರು

Update: 2018-08-11 13:15 GMT

ಮೀರತ್, ಆ. 11: ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಅವರು ಶುಕ್ರವಾರ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹೂ ಹಾರ ಹಾಕಿದ ಬಳಿಕ ಉತ್ತರಪ್ರದೇಶದ ದಲಿತ ವಕೀಲರ ಗುಂಪೊಂದು ಪ್ರತಿಮೆಯನ್ನು ಹಾಲು ಹಾಗೂ ಗಂಗಾ ಜಲದಿಂದ ಶುದ್ಧೀಕರಿಸಿದ ಘಟನೆ ಶುಕ್ರವಾರ ನಡೆದಿದೆ.

ಬನ್ಸಾಲ್ ಹೂ ಹಾರ ಹಾಕಿದ ಬಳಿಕ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲಿರುವ ಅಂಬೇಡ್ಕರ್ ಪ್ರತಿಮೆ ಅಶುದ್ಧಗೊಂಡಿದೆ ಎಂದು ವಕೀಲರು ತಿಳಿಸಿದ್ದಾರೆ. ‘‘ಆರ್‌ಎಸ್‌ಎಸ್‌ನ ರಾಕೇಶ್ ಸಿನ್ಹಾ ಹೂ ಹಾರ ಹಾಕಿದ ಕಾರಣಕ್ಕೆ ನಾವು ಪ್ರತಿಮೆ ಶುದ್ಧೀಕರಿಸಿದ್ದೆವು. ಉತ್ತರಪ್ರದೇಶದ ಬಿಜೆಪಿ ಸರಕಾರ ದಲಿತರನ್ನು ದಮನಿಸುತ್ತಿದೆ. ಅವರಿಗೆ ಅಂಬೇಡ್ಕರ್ ವಿರುದ್ಧ ಯಾವುದೇ ಗೌರವ ಇಲ್ಲ. ಆದರೆ, ತಮ್ಮ ಪಕ್ಷವನ್ನು ಪ್ರಚುರಪಡಿಸಲು ಹಾಗೂ ದಲಿತ ಸಮುದಾಯಗಳನ್ನು ಆಕರ್ಷಿಸಲು ಅವರು ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ’’ ಎಂದು ವಕೀಲರು ಹೇಳಿದ್ದಾರೆ.

ಅಂಬೇಡ್ಕರ್ ಅವರು ದಲಿತರ ರೂಪಕ. ಅವರು ಅಸ್ಪಶತೆ ವಿರುದ್ಧ ಚಳವಳಿ ನಡೆಸಿದರು. ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳನ್ನು ಬೆಂಬಲಿಸಿದರು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News