2,500 ದೀಪಗಳಿಂದ ಹೆಚ್ಚಿದ ಕೆಂಪುಕೋಟೆ ಚಂದ

Update: 2018-08-11 13:19 GMT

ಹೊಸದಿಲ್ಲಿ, ಆ. 11: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಚಾರಿತ್ರಿಕ ಕೆಂಪು ಕೋಟೆಯಲ್ಲಿ ಶುಕ್ರವಾರದಿಂದ ಸಂಜೆ 7.30ರಿಂದ 11 ಗಂಟೆ ವರಗೆ 2,500 ದೀಪಗಳನ್ನು ಉರಿಸುವುದನ್ನು ಆರಂಭಿಸಲಾಗಿದೆ ಎಂದು ಸಾಂಸ್ಕೃತಿಕ ಸಚಿವಾಲಯ ತಿಳಿಸಿದೆ.

 ಚಾರಿತ್ರಿಕ ಸ್ಮಾರಕವಾದ ಕೋಟೆಯ ಎದುರು ಗೋಡೆ ಹಾಗೂ ಅದರ ಎರಡು ಪ್ರಮುಖ ಗೇಟುಗಳಾದ ಲಾಹೋರಿ ಗೇಟ್ ಹಾಗೂ ದಿಲ್ಲಿ ಗೇಟ್‌ನಲ್ಲಿ ದೀಪಗಳನ್ನು ಉರಿಸುತ್ತಿರುವುದು ಇದೇ ಮೊದಲು ದೀಪ ಉರಿಸುವ ಕಾರ್ಯಕ್ರಮ ಸಂಸ್ಕೃತಿ ಖಾತೆಯ ಸಹಾಯಕ ಸಚಿವ ಮಹೇಶ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಆರಂಭವಾಯಿತು. 17ನೇ ಶತಮಾನದ ಮೊಗಲ್ ಯುಗದ ವಾಸ್ತುಶಿಲ್ಪವಾದ ಕೆಂಪು ಕೋಟೆಯ ಅಂದ ದೀಪ ಉರಿಸುವಿಕೆಯಿಂದ ಇನ್ನಷ್ಟು ಹೆಚ್ಚಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News