ವರದಕ್ಷಿಣೆಗಾಗಿ ಮಹಿಳೆಯನ್ನು ಥಳಿಸಿ ಕೊಂದರು !
Update: 2018-08-12 21:55 IST
ಲಕ್ನೋ, ಆ.12: ವರದಕ್ಷಿಣೆ ವಿಚಾರದಲ್ಲಿ ಮಹಿಳೆಯೊಬ್ಬರನ್ನು ಪತಿ ಹಾಗು ಸಂಬಂಧಿಕರು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಇಲ್ಲಿನ ಅಬ್ದನ್ ನಗರ್ ಗ್ರಾಮದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯ ತಂದೆ ನೀಡಿದ ದೂರಿನನ್ವಯ ಆಕೆಯ ಮಾವ, ಅತ್ತೆ, ಪತಿ ಹಾಗು ಮೈದುನನ ವಿರುದ್ಧ ಜಿಂಜನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ರಾಜೇಶ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ಮಹಿಳೆಯ ಪತಿ ಹಾಗು ಅತ್ತೆಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.