×
Ad

ಸೂರ್ಯನನ್ನು ಸ್ಪರ್ಶಿಸುವ ಪ್ರಥಮ ಯೋಜನೆಗೆ ನಾಸಾ ಚಾಲನೆ

Update: 2018-08-12 22:59 IST

ವಾಶಿಂಗ್ಟನ್, ಆ.12: ಸೂರ್ಯನ ಬಾಹ್ಯ ವಾತಾವರಣ ಮತ್ತು ಅದರಿಂದ ಆಕಾಶನ ಹವಾಮಾನದ ಮೇಲಾಗುವ ಪರಿಣಾಮವನ್ನು ಅಭ್ಯಸಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ನಾಸಾದ ಪಾರ್ಕರ್ ಸೌರ ತನಿಖಾ ಯೋಜನೆಗೆ ರವಿವಾರ ಚಾಲನೆ ನೀಡಲಾಯಿತು. ಏಳು ವರ್ಷಗಳ ದೀರ್ಘ ಪ್ರಯಾಣ ಬೆಳೆಸಲಿರುವ ಗಗನನೌಕೆಯನ್ನು ಯುಎಸ್‌ನ ಕೇಪ್ ಕನವೆರಲ್ ವಾಯುಪಡೆ ನಿಲ್ದಾಣದ ಗಗನ ಹಾರಾಟ ಸಂಕೀರ್ಣ 37ರಲ್ಲಿ ರವಿವಾರ ಮುಂಜಾನೆ ಹಾರಿಬಿಡಲಾಯಿತು.

ಈ ನೌಕೆಯನ್ನು ಶನಿವಾರವೇ ಹಾರಿಬಿಡಲು ನಿರ್ಧರಿಸಲಾಗಿದ್ದರೂ ಉಡಾವಣಾ ಮಿತಿಯನ್ನು ಉಲ್ಲಂಘಿಸಿದ ಕಾರಣ ಕೈಬಿಡಲಾಗಿತ್ತು. ಥರ್ಮಲ್ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಕಾರಿನ ಗಾತ್ರದ ಗಗನನೌಕೆಯು ಸೂರ್ಯನ ವಾತಾವರಣವನ್ನು ನೇರವಾಗಿ ಪ್ರವೇಶಿಸಲಿದೆ. ಇಲ್ಲಿಯವರೆಗೆ ಸೂರ್ಯನ ವಾತಾವರಣದ ಇಷ್ಟು ಸಮೀಪಕ್ಕೆ ಯಾವ ಗಗನನೌಕೆಯೂ ತೆರಳಿಲ್ಲ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ. 1.5 ಬಿಲಿಯನ್ ಡಾಲರ್ ಯೋಜನೆಯಾಗಿರುವ ಪಾರ್ಕರ್ ಸೂರ್ಯನ ಬಾಹ್ಯ ವಾತಾವರಣ ಕೊರೊನದ ಸುತ್ತ ಸುತ್ತಲಿದ್ದು ಅದನ್ನು ಬಹಳ ಸಮೀಪದಿಂದ ಅಧ್ಯಯನ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News