ಮುಖ್ಯ ಕಾರ್ಯದರ್ಶಿಗೆ ಹಲ್ಲೆ ಆರೋಪ: ಕೇಜ್ರಿವಾಲ್, ಸಿಸೋಡಿಯಾ ವಿರುದ್ಧ ಪ್ರಕರಣ

Update: 2018-08-13 15:35 GMT

ಹೊಸದಿಲ್ಲಿ,ಆ.13: ದಿಲ್ಲಿಯ ಮುಖ್ಯ ಕಾರ್ಯದರ್ಶಿ ಅಂಷು ಪ್ರಕಾಶ್ ಮೇಲೆ ಹಲ್ಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಇದು ಕೇಂದ್ರ ಮತ್ತು ದಿಲ್ಲಿ ಸರಕಾರದ ನಡುವೆ ಇನ್ನೊಂದು ಸಂಘರ್ಷವನ್ನು ಹುಟ್ಟುಹಾಕುವ ನಿರೀಕ್ಷೆಯಿದೆ.

ದಿಲ್ಲಿ ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ನಡೆದಿದ್ದ ತಡರಾತ್ರಿಯ ಸಭೆಯಲ್ಲಿ ಉಪಸ್ಥಿತರಿದ್ದ 11 ಇತರ ಸಚಿವರು ಮತ್ತು ಶಾಸಕರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ. ಕೇಜ್ರಿವಾಲ್‌ರ ಮಾಜಿ ಸಲಹೆಗಾರ ವಿ.ಕೆ.ಜೈನ್ ಅವರೂ ಹಾಜರಿದ್ದ ಈ ಸಭೆಯಲ್ಲಿ ತನ್ನ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪ್ರಕಾಶ ಆರೋಪಿಸಿದ್ದರು.

ಸರಕಾರದ ಮೂರನೇ ವರ್ಷಾಚರಣೆಯ ಟಿವಿ ಜಾಹೀರಾತುಗಳ ಬಿಡುಗಡೆಯಲ್ಲಿ ವಿಳಂಬಕ್ಕೆ ಕಾರಣವನ್ನು ವಿವರಿಸುವಂತೆ ಕೇಜ್ರಿವಾಲ್ ತನಗೆ ಸೂಚಿಸಿದ್ದ ಸಂದರ್ಭ ತನ್ನ ಮೇಲೆ ದಾಳಿ ನಡೆದಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಈ ಪ್ರಕರಣವು ಅಧಿಕಾರಿಗಳು ಮತ್ತು ಸಚಿವರ ನಡುವೆ ಸುದೀರ್ಘ ಬಿಕ್ಕಟ್ಟಿಗೆ ನಾಂದಿ ಹಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News