ಇಂಧನದ ಸ್ವರೂಪ ಸೂಚಿಸಲು ವಾಹನಗಳಿಗೆ ಬಣ್ಣದ ಸ್ಟಿಕರ್ : ಕೇಂದ್ರದ ಪ್ರಸ್ತಾವಕ್ಕೆ ಸುಪ್ರೀಂ ಒಪ್ಪಿಗೆ

Update: 2018-08-13 15:41 GMT

ಹೊಸದಿಲ್ಲಿ, ಆ.13: ವಾಹನಗಳಲ್ಲಿ ಬಳಕೆಯಾಗುವ ಇಂಧನದ ಸ್ವರೂಪವನ್ನು ಸೂಚಿಸುವ ಹೊಲೊಗ್ರಾಂ ಆಧರಿತ ಬಣ್ಣದ ಸ್ಟಿಕರ್‌ಗಳನ್ನು ಅವುಗಳ ಮೇಲೆ ಅಂಟಿಸುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಸ್ತಾವವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಒಪ್ಪಿಕೊಂಡಿದೆ.

ಪೆಟ್ರೋಲ್ ಮತ್ತು ಸಿಎನ್‌ಜಿ ವಾಹನಗಳಿಗೆ ನಸುನೀಲಿ ಬಣ್ಣದ ಮತ್ತು ಡೀಸೆಲ್ ವಾಹನಗಳಿಗೆ ಕಿತ್ತಳೆ ಬಣ್ಣದ ಸ್ಟಿಕರ್‌ಗಳನ್ನು ಬಳಸಲಾಗುವುದು ಎಂದು ಸಚಿವಾಲಯವು ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠಕ್ಕೆ ತಿಳಿಸಿತು.

ದಿಲ್ಲಿ-ಎನ್‌ಸಿಆರ್‌ನಲ್ಲಿ ಸಂಚರಿಸುವ ವಾಹನಗಳಿಗೆ ಬಣ್ಣದ ಸ್ಟಿಕರ್‌ಗಳ ಬಳಕೆಯನ್ನು ಸೆ.30ರೊಳಗೆ ಜಾರಿಗೊಳಿಸುವಂತೆ ಪೀಠವು ಸಚಿವಾಲಯಕ್ಕೆ ಸೂಚಿಸಿತು.

 ಇಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಹಸಿರು ಬಣ್ಣದ ಸ್ಟಿಕರ್‌ಗಳನ್ನು ಅಂಟಿಸುವ ಬಗ್ಗೆ ಪರಿಶೀಲಿಸುವಂತೆಯೂ ಪೀಠವು ಸಚಿವಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರಿಗೆ ತಿಳಿಸಿತು.

ದಿಲ್ಲಿಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಕುರಿತು ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News