ಸೆಪ್ಟಂಬರ್: ಉಭಯ ಕೊರಿಯಗಳ ನಡುವೆ ಇನ್ನೊಂದು ಶೃಂಗಸಮ್ಮೇಳನ

Update: 2018-08-13 16:46 GMT

ಸಿಯೋಲ್, ಆ. 13: ಉತ್ತರ ಮತ್ತು ದಕ್ಷಿಣ ಕೊರಿಯಗಳ ಗಡಿಯಲ್ಲಿರುವ ಸೇನಾ ಮುಕ್ತ ವಲಯದಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ ಬಳಿಕ, ಸೆಪ್ಟಂಬರ್‌ನಲ್ಲಿ ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಇನ್ನೊಂದು ಶೃಂಗ ಸಮ್ಮೇಳನವನ್ನು ನಡೆಸಲು ಉಭಯ ಕೊರಿಯಗಳು ಸೋಮವಾರ ಒಪ್ಪಿಕೊಂಡಿವೆ.

‘‘ಈಗಾಗಲೇ ನಿಗದಿಯಾಗಿರುವಂತೆ ಸೆಪ್ಟಂಬರ್‌ನಲ್ಲಿ ಪ್ಯಾಂಗ್‌ಯಾಂಗ್‌ನಲ್ಲಿ ದಕ್ಷಿಣ-ಉತ್ತರ ಶೃಂಗ ಸಮ್ಮೇಳನವನ್ನು ಏರ್ಪಡಿಸಲು ಈ ಸಭೆಯಲ್ಲಿ ಉಭಯ ಬಣಗಳು ಒಪ್ಪಿಕೊಂಡವು’’ ಎಂದು ಜಂಟಿ ಹೇಳಿಕೆಯೊಂದು ತಿಳಿಸಿದೆ. ಆದರೆ, ನಿಖರ ದಿನಾಂಕವನ್ನು ಒದಗಿಸಲಾಗಿಲ್ಲ.

ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಉತ್ತರ ಕೊರಿಯ ರಾಜಧಾನಿಗೆ ಪ್ರಯಾಣಿಸಿದರೆ, ದಕ್ಷಿಣ ಕೊರಿಯದ ಅಧ್ಯಕ್ಷರೊಬ್ಬರು ಉತ್ತರ ಕೊರಿಯಕ್ಕೆ ಹೋಗುವುದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಮೊದಲ ಬಾರಿಯಾಗಿರುತ್ತದೆ.

‘‘ಅಮೆರಿಕದೊಂದಿಗಿನ ತನ್ನ ಸ್ಥಗಿತಗೊಂಡಿರುವ ಮಾತುಕತೆಯನ್ನು ಮುಂದುವರಿಸಲು ವಿಧಾನವೊಂದನ್ನು ಕಂಡುಕೊಳ್ಳುವುದಕ್ಕಾಗಿ ಉತ್ತರ ಕೊರಿಯ ಸೆಪ್ಟಂಬರ್ ಶೃಂಗ ಸಮ್ಮೇಳನವನ್ನು ಏರ್ಪಡಿಸಿರುವ ಸಾಧ್ಯತೆಯಿದೆ’’ ಎಂದು ವೀಕ್ಷಕರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News