ವಿಧಾನಸಭಾ ಚುನಾವಣೆ: ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕಾದಿದೆಯೇ ಬಿಜೆಪಿಗೆ ಶಾಕ್ ?

Update: 2018-08-13 18:36 GMT
Photo: Harsh Sahani/The Quint

ಹೊಸದಿಲ್ಲಿ, ಆ. 13: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸಲು ಮೋದಿ ಅಲೆ ನೆರವಾಗಲಿದೆ ಎಂದು ಸಿ ವೋಟರ್ ಹಾಗೂ ಎಬಿಪಿ ನ್ಯೂಸ್ ಆಯೋಜಿಸಿದ್ದ ಸಮೀಕ್ಷೆ ತಿಳಿಸಿದೆ.

ವಿಧಾನ ಸಭೆ ಚುನಾವಣೆಗಳಲ್ಲಿ ಮಧ್ಯಪ್ರದೇಶದಲ್ಲಿ 230 ಸ್ಥಾನಗಳಲ್ಲಿ 117ಸ್ಥಾನ, ಛತ್ತೀಸ್‌ಗಢದಲ್ಲಿ 90 ಸ್ಥಾನಗಳಲ್ಲಿ 54 ಸ್ಥಾನ, ರಾಜಸ್ಥಾನದಲ್ಲಿ 200 ಸ್ಥಾನಗಳಲ್ಲಿ 130 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಲಿದೆ. ಬಿಜೆಪಿ ಕ್ರಮವಾಗಿ ಈ ಮೂರು ರಾಜ್ಯಗಳಲ್ಲಿ 106, 33 ಹಾಗೂ 57 ಸ್ಥಾನಗಳಲ್ಲಿ ತೃಪ್ತಿ ಪಡೆದುಕೊಳ್ಳಲಿದೆ ಎಂದು ಜನಾಭಿಪ್ರಾಯ ಸಂಗ್ರಹ ಹೇಳಿದೆ. ರಾಜಸ್ಥಾನ ವಿಧಾನ ಸಭೆಯಲ್ಲಿ 200 ಸ್ಥಾನಗಳಿದ್ದು, ಕಾಂಗ್ರೆಸ್ 130 ಸ್ಥಾನ, ಬಿಜೆಪಿ, 57 ಸ್ಥಾನ, ಇತರ ಪಕ್ಷಗಳು 13 ಸ್ಥಾನಗಳನ್ನು ಗಳಿಸಲಿದೆ. 2013 ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನ, ಕಾಂಗ್ರೆಸ್ 21 ಸ್ಥಾನ ಹಾಗೂ ಇತರ ಪಕ್ಷಗಳು 16 ಸ್ಥಾನಗಳನ್ನು ಪಡೆದುಕೊಂಡಿತ್ತು. ಮಧ್ಯಪ್ರದೇಶ ವಿಧಾನ ಸಭೆಯಲ್ಲಿ 230 ಸ್ಥಾನಗಳಿದ್ದು, ಕಾಂಗ್ರೆಸ್ 117 ಸ್ಥಾನ ಹಾಗೂ ಬಿಜೆಪಿ 106 ಸ್ಥಾನ, ಇತರ ಪಕ್ಷಗಳು 7 ಸ್ಥಾನಗಳನ್ನು ಗಳಿಸಲಿದೆ. 2013ರಲ್ಲಿ ಬಿಜೆಪಿ 165 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ 58 ಸ್ಥಾನಗಳನ್ನು ಪಡೆದುಕೊಂಡು ತೃಪ್ತಿಪಟ್ಟುಕೊಂಡಿತ್ತು. ಇತರ ಪಕ್ಷಗಳು 7 ಸ್ಥಾನಗಳನ್ನು ಪಡೆದುಕೊಂಡಿದ್ದವು. ಛತ್ತೀಸ್‌ಗಢ ವಿಧಾನ ಸಭೆಯಲ್ಲಿ 90 ಸ್ಥಾನಗಳಿದ್ದು, ಕಾಂಗ್ರೆಸ್ 54 ಸ್ಥಾನ, ಬಿಜೆಪಿ 33 ಸ್ಥಾನ, ಇತರ ಪಕ್ಷಗಳು 3 ಸ್ಥಾನಗಳನ್ನು ಪಡೆದುಕೊಳ್ಳಲಿವೆ. 2013ರ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನ, ಕಾಂಗ್ರೆಸ್ 39 ಸ್ಥಾನ ಹಾಗೂ ಇತರ ಪಕ್ಷಗಳು 2 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ಇದೆ. ಈ ಮೂರು ರಾಜ್ಯಗಳಲ್ಲಿ ಜಯಗಳಿಸಿದರೆ, ಲೋಕಸಭೆ ಚುನಾವಣೆಗೆ ಅದು ಬಹುದೊಡ್ಡ ಉತ್ತೇಜನ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News