×
Ad

ಕಲ್ಲಿದ್ದಲು ಗಣಿ ಹಂಚಿಕೆ ಪ್ರಕರಣ: ನವೀನ್ ಜಿಂದಾಲ್,ಇತರರಿಗೆ ನ್ಯಾಯಾಲಯದಿಂದ ಸಮನ್ಸ್

Update: 2018-08-14 21:04 IST

ಹೊಸದಿಲ್ಲಿ,ಆ.14: ಜಾರ್ಖಂಡ್‌ನ ಅಮರಕೊಂಡಾ ಮುರ್ಗಾದಂಗಲ್ ಕಲ್ಲಿದ್ದಲು ಗಣಿಯ ಹಂಚಿಕೆಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಹಣ ವಹಿವಾಟು ಕುರಿತಂತೆ ಕೈಗಾರಿಕೋದ್ಯಮಿ ಮತ್ತು ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್ ಮತ್ತು ಇತರ 14 ಜನರಿಗೆ ದಿಲ್ಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಸಮನ್ಸ್ ಹೊರಡಿಸಿದೆ.

ಅ.15ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ಭರತ ಪರಾಶರ ಅವರು ಆದೇಶಿಸಿದ್ದಾರೆ.

ಜಿಂದಾಲ್ ಒಡೆತನದ ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿ.(ಜೆಎಸ್‌ಪಿಎಲ್) ಕಂಪನಿಯು ಇತರರೊಂದಿಗೆ ಸೇರಿಕೊಂಡು ಎರಡು ಕೋ.ರೂ.ಗೂ ಅಧಿಕ ಹಣವನ್ನು ಲಂಚದ ರೂಪದಲ್ಲಿ ನೀಡಿ ಕಲ್ಲಿದ್ದಲು ಗಣಿ ಹಂಚಿಕೆಗಾಗಿ ಪರಿಶೀಲನಾ ಸಮಿತಿಯ ಮೇಲೆ ಪ್ರಭಾವ ಬೀರಿತ್ತು ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಅಂತಿಮ ವರದಿಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News