ಛತ್ತೀಸ್‌ಗಡ ರಾಜ್ಯಪಾಲ ಬಲರಾಮ್‌ಜಿ ದಾಸ್ ಟಂಡನ್ ನಿಧನ

Update: 2018-08-14 18:17 GMT

ರಾಯಪುರ, ಆ. 14: ಛತ್ತೀಸ್‌ಗಡದ ರಾಜ್ಯಪಾಲ ಬಲರಾಮ್‌ಜಿ ದಾಸ್ ಟಂಡನ್ ಮಂಗಳವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಟಂಡನ್ ಅವರನ್ನು ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ಬೆಳಗ್ಗೆ ದಾಖಲಿಸಲಾಗಿತ್ತು. ಆನಂತರ ಅವರು ಮೃತಪಟ್ಟರು ಎಂದು ರಾಜ್ಯಪಾಲರ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ.

ಟಂಡನ್ ಅವರು ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2014ರಲ್ಲಿ ಅವರು ಛತ್ತೀಸ್‌ಗಡದ ರಾಜ್ಯಪಾಲರಾಗಿ ನಿಯೋಜಿತರಾಗಿದ್ದರು. ಟಂಡನ್ ಅವರು ತನ್ನ ರಾಜಕೀಯ ಜೀವನದಲ್ಲಿ ಪಂಜಾಬ್‌ನ ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 6 ಬಾರಿ ಶಾಸಕರಾಗಿದ್ದ ಅವರು ತುರ್ತು ಪರಿಸ್ಥಿತಿಯಲ್ಲಿ 1975ರಿಂದ 1977ರ ವರೆಗೆ ಜೈಲಿನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News