ಮಹಾತ್ಮಾಗಾಂಧಿ ಭೇಟಿಯ ನೆನಪು ಸಾರುವ ಗಾಂಧೀ ಸ್ಕ್ವೇಯರ್

Update: 2018-08-15 08:07 GMT

ಮೈಸೂರು, ಆ.14: ಮಹಾರಾಜರ ಆಡಳಿದಲ್ಲಿ ಮೈಸೂರಿಗೆ ಮಹಾತ್ಮಾ ಗಾಂಧೀಜಿ 1935ರ ಸೆಪ್ಟಂಬರ್‌ನಲ್ಲಿ ಬಂದಿದ್ದರು ಎಂಬ ಇತಿಹಾಸವಿದೆ. ‘ಮಹಾತ್ಮ ಗಾಂಧೀಜಿ ನಮ್ಮ ಊರಿಗೆ ಬಂದಿದ್ದಾರಂತೆ ಅವರನ್ನು ನೋಡಲು ಹೋಗುತ್ತಿದ್ದೇವೆ’ ಎಂದು ಜಿಲ್ಲೆಯಹಲವಾರು ಊರುಗಳಿಂದ ಮೈಸೂರು ನಗರಕ್ಕೆ ತಂಡೋಪತಂಡ ವಾಗಿ ಜನ ಬಂದಿದ್ದರು. 1935ರ ಸೆಪ್ಟಂಬರ್‌ನಲ್ಲಿ ಮಹಾತ್ಮಾ ಗಾಂಧಿ ಮೈಸೂರಿಗೆ ಭೇಟಿ ನೀಡಿದ್ದರು. ಊಟ ಬಟ್ಟೆಗೆ ತೊಂದರೆ ಯಿದ್ದ, ಸಾಕ್ಷರತೆ ಎಂಬುದು ಅಷ್ಟಾಗಿ ಇಲ್ಲದ ಸಮಯವದು. ಸ್ವಾತಂತ್ರೋತ್ಸವದ ಚಳವಳಿಗಳಲ್ಲಿ ಭಾಗವ ಹಿಸುವುದರಲ್ಲಿ ಮೈಸೂರಿಗರು ಪ್ರಮುಖರು. ಇಲ್ಲಿನ ಹಲವಾರು ಹೋರಾಟ ಗಾರರು ಇತಿಹಾಸದ ಪುಟಗಳಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ಸ್ವಾತಂತ್ರಕ್ಕಾಗಿ ದೇಶದ ಹಲವಾರು ನಾಯಕರು ವಿವಿಧ ರಾಜ್ಯಗಳ ಪ್ರವಾಸ ಕೈಗೊಂಡಿದ್ದರು. ಆ ಸಮಯದಲ್ಲಿ ಮಹಾತ್ಮಾ ಗಾಂಧಿ ಮೈಸೂರಿಗೆ ಭೇಟಿ ನೀಡಿ ಇಲ್ಲಿನ ಜನರಿಗೆ ಬ್ರಿಟಿಷ್ ಆಡಳಿತದ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿರು ವುದು ಈಗ ಇತಿಹಾಸ. ಮೊದಲಿಗೆ ಮೈಸೂರಿನ ಪ್ರಸಿದ್ಧ ಬಟ್ಟೆ ತಯಾರಿಕೆಯ ಕೇಂದ್ರ ವಾಗಿದ್ದ ಕೆ.ಆರ್.ಮಿಲ್‌ಗೆ ಭೇಟಿ ನೀಡಿ ನೂಲುಗಳು ತಯಾರಾ ಗುವುದನ್ನು ನೋಡಿದ್ದರು. ನಂತರ ಅರಮನೆಯ ಪಕ್ಕಕ್ಕೆ ಬಂದ ಅವರು, ಅಲ್ಲಿ ನೆರೆದಿದ್ದ ಜನರನ್ನು ಕಂಡು ಪುಳಕಿತರಾಗಿ ‘ಬ್ರಿಟಿಷರು ನಮ್ಮನ್ನು ಗುಲಾಮರಂತೆ ಕಾಣುತ್ತಿ ದ್ದಾರೆ; ಹಾಗಾಗಿ ನಾವು ನಮ್ಮ ಸ್ವಾತಂತ್ರಕ್ಕಾಗಿ ಹೋರಾಡುವ ಅನಿವಾರ್ಯ ಇದೆ’ಎಂದು ಹೇಳಿ ಹುರಿದುಂಬಿಸಿದ್ದರಂತೆ. ಈಗ ಆ ಸ್ಥಳವೇ ‘ಗಾಂಧಿ ಸ್ಕೇಯರ್’ ಎಂದು ಪ್ರಸಿದ್ಧಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News