ನಿರಾಶೆ ಮೂಡಿಸುವ `ಸತ್ಯಮೇವ ಜಯತೇ'

Update: 2018-08-15 08:27 GMT

ಮಿಲಾಪ್ ಮಿಲನ್ ಝವೇರಿ ನಿರ್ದೇಶನದ ಹಾಗೂ ಜಾನ್ ಅಬ್ರಹಾಂ, ಮನೋಜ್ ಬಾಜಪೇಯಿ, ಐಶಾ ಶರ್ಮಾ ಮುಖ್ಯ ತಾರಾಗಣದಲ್ಲಿರುವ `ಸತ್ಯಮೇವ ಜಯತೇ' ಚಿತ್ರವು ‘ದೊಡ್ಡ ದನಿಯಲ್ಲಿ ಮೊಳಗಿಸದ ದೇಶಭಕ್ತಿಯು ದೇಶಭಕ್ತಿಯೇ ಅಲ್ಲ’ ಎಂಬ ಸಂದೇಶ ಸಾರುವಂತಿದೆ.

ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ವೀರ್ ಪಾತ್ರಧಾರಿಯಾಗಿದ್ದು, ಮುಂಬೈಯಾದ್ಯಂತ ನೈತಿಕ ಪೊಲೀಸ್ ಗಿರಿ ನಡೆಸುತ್ತಾ ದುಷ್ಟ ಪೊಲೀಸರನ್ನು ಕೊಲೆಗೈಯ್ಯುತ್ತಾ ಸಾಗುತ್ತಾನೆ. ಆದರೆ ಕೊಲೆಗೈಯ್ಯುವ ಮುನ್ನ ಅವರಿಗೆ ತನ್ನ ಎರಡು ನಿಮಿಷಗಳ ಕವನವನ್ನು ಕೇಳುವಂತೆ ಮಾಡಿ ಅವರತ್ತ ಬೆಂಕಿ ಕಡ್ಡಿಯನ್ನು ಎಸೆಯುತ್ತಾನೆ. ವೀರ್ ಎಂಬ ಈ ವ್ಯಕ್ತಿಯನ್ನು ಸೆರೆ ಹಿಡಿಯುವ ಕೆಲಸವನ್ನು ಡಿಸಿಪಿ ಶಿವಾಂಶ್ ಗೆ ವಹಿಸಲಾಗುತ್ತದೆ. ಈ ಪಾತ್ರವನ್ನು ಮನೋಜ್ ಬಾಜಪೇಯಿ ನಿರ್ವಹಿಸಿದ್ದಾರೆ. ವೀರ್ ಸೆರೆಹಿಡಿಯುವ ಕೆಲಸಕ್ಕೆ ಅವರೇ ಅತ್ಯಂತ ಅರ್ಹ ವ್ಯಕ್ತಿಯೆಂದು ತಿಳಿಯಲಾಗುತ್ತದೆಯಲ್ಲದೆ ಮುಂಬೈಯಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸುವ ಕೆಲವೇ ಕೆಲವು ಪ್ರತಿಭಾವಂತ ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎಂಬರ್ಥದಲ್ಲಿ  ಬಿಂಬಿಸಲಾಗಿದೆ. 

ಚಿತ್ರದ ಶೀರ್ಷಿಕೆಗೂ ಚಿತ್ರದ ಕಥೆಗೂ ಹೊಂದಿ ಬರುವುದಿಲ್ಲ. `ಸತ್ಯಮೇವ ಜಯತೇ'  ಚಿತ್ರದಲ್ಲಿ ದುಷ್ಟ ಪೊಲೀಸರನ್ನು ಹತ್ಯೆ ನಡೆಸುವುದರಿಂದ ನ್ಯಾಯ ದೊರಕಿಸಿದಂತೆ  ಎಂಬಂತೆ ಬಿಂಬಿಸಲಾಗಿದೆ. ಚಿತ್ರದಲ್ಲಿ ರಾಷ್ಟ್ರಭಕ್ತಿಯ ಹೆಸರಿನಲ್ಲಿ ಅನೇಕ ಜೀವಗಳು ಬಲಿಯಾಗುತ್ತವೆ. ಯೋಚಿಸುವಾಗಲೇ ಭಯ ಮೂಡುತ್ತದೆ. ಈ ಚಿತ್ರವನ್ನು ವೀಕ್ಷಿಸುವುದೇ ಒಂದು ಹಿಂಸಾತ್ಮಕ ಅನುಭವ ಹಾಗೂ ಸಮಯ ವ್ಯರ್ಥವಲ್ಲದೆ ಮತ್ತಿನೇನಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News