ಬಹರೈನ್‌ನ ಆರ್ಥಿಕ ಸ್ಥಿರತೆಗೆ ನೆರೆ ದೇಶಗಳ ಬದ್ಧತೆ

Update: 2018-08-16 16:22 GMT

ಮನಾಮ (ಬಹರೈನ್), ಆ. 16: ಅರಬ್ ಮನಿಟರಿ ಫಂಡ್ ಜೊತೆ ಸಮನ್ವಯತೆಯೊಂದಿಗೆ ಬಹರೈನ್‌ಗಾಗಿ ಸಿದ್ಧಪಡಿಸಲಾದ ಸಮಗ್ರ ಆರ್ಥಿಕ ಕಾರ್ಯಕ್ರಮದ ಪರಿಶೀಲನೆಗಾಗಿ ಸೌದಿ ಅರೇಬಿಯ, ಯುಎಇ, ಕುವೈತ್ ಮತ್ತು ಬಹರೈನ್‌ಗಳ ಹಣಕಾಸು ಸಚಿವರು ಗುರುವಾರ ಮನಾಮದಲ್ಲಿ ಸಭೆ ಸೇರಿದರು.

‘‘ಬಹರೈನ್‌ಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದ ಎಲ್ಲ ಆಯ್ಕೆಗಳನ್ನು ಪರಿಶೀಲಿಸುವ ಹಿಂದಿನ ಹೇಳಿಕೆಗೆ ಅನುಸಾರವಾಗಿ, ಬಹರೈನ್‌ನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ತ್ವರಿತಗೊಳಿಸುವ ಸಮಗ್ರ ಕಾರ್ಯಕ್ರಮದ ಪರಿಶೀಲನೆಗಾಗಿ ಸಚಿವರು ಸಭೆ ಸೇರಿದರು. ಬಹರೈನ್‌ನ ಆರ್ಥಿಕ ಅಗತ್ಯಗಳನ್ನು ಪೂರೈಸುವ ಬದ್ಧತೆಯನ್ನು ಈ ದೇಶಗಳು ವ್ಯಕ್ತಪಡಿಸಿದವು’’ ಎಂದು ಜಂಟಿ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News