ವಾಜಪೇಯಿ ಮತ್ತು ಪ್ರೇಮಸಂಬಂಧ!

Update: 2018-08-16 18:51 GMT

ಭಾರತದಲ್ಲಿ ಆಡಳಿತ ನಡೆಸಿದ ಪ್ರಧಾನಿಗಳಲ್ಲಿ ಅತ್ಯುತ್ತಮ ಪ್ರಧಾನಿ ಎಂದು ಪರಿಗಣಿಸಲ್ಪಟ್ಟಿ ರುವ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದ ಅಲ್ಪಾವಧಿ ಯಲ್ಲೇ ಹಲವು ಗುರಿಗಳನ್ನು ಸಾಧಿಸಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದರೂ, ಶ್ರೀಮತಿ ಕೌಲ್ ಅವರೊಂದಿಗಿನ ವಿವಾದದ ಕಾರಣಕ್ಕಾಗಿಯೂ ಅವರನ್ನು ಜನತೆ ನೆನಪಿಸಿಕೊಳ್ಳುತ್ತಾರೆ. ಗೌರವ ಕೊಟ್ಟು ಗೌರವ ಪಡೆದುಕೊಳ್ಳುವುದು ಹೇಗೆಂಬು ದನ್ನು ವಾಜಪೇಯಿಯವರಿಂದ ಕಲಿತುಕೊಳ್ಳಬೇಕು. ಸರಳ ವ್ಯಕ್ತಿತ್ವದ ಸೌಮ್ಯ ವ್ಯಕ್ತಿ. ತನ್ನ ಜೀವಿತಾವಧಿಯಲ್ಲಿ ಮದುವೆಯಾ ಗದಿದ್ದರೂ ಅವರು ನಮಿತಾ ಎಂಬವರನ್ನು ಪುತ್ರಿಯಾಗಿ ದತ್ತು ಸ್ವೀಕರಿಸಿದ್ದರು. ನಮಿತಾ ಅವರಿಗೆ ಜನ್ಮ ನೀಡಿದ್ದ ಶ್ರೀಮತಿ ರಾಜಕುಮಾರಿ ಕೌಲ್ ಎಂಬವರ ಜೊತೆ ಅಟಲ್ ಪ್ರೇಮ ಸಂಬಂಧ ಹೊಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ನಮಿತಾಳನ್ನು ಸ್ವಂತ ಮಗಳಂತೆಯೇ ಅಟಲ್ ಪ್ರೀತಿಸುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಟಲ್ ಹಾಗೂ ಶ್ರೀಮತಿ ಕೌಲ್ ಮಧ್ಯೆ ಸಂಬಂಧವಿತ್ತೇ ಎಂಬುದು ಸ್ಪಷ್ಟವಾಗಿಲ್ಲ.

ಇವರಿಬ್ಬರ ಸಂಬಂಧದ ಕುರಿತು ಗಾಳಿ ಸುದ್ದಿ, ವಿವಾದಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಈ ಕುರಿತ ಸಂದೇಹ ಗಳಿಗೆ ಸ್ಪಷ್ಟನೆ ನೀಡಲು ಇಬ್ಬರೂ ಮುಂದಾಗಿರಲಿಲ್ಲ. ವೌನಂ ಸಮ್ಮತಿ ಲಕ್ಷಣವೇ ಎಂದು ಕೂಡಾ ಕೆಲವರು ಆಡಿಕೊಂಡಿದ್ದರು. ರಾಜುಮಾರಿ ಹಾಗೂ ಅಟಲ್ ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದವರು. ಕಾಲೇಜು ಶಿಕ್ಷಣ ಮುಗಿದ ಬಳಿಕ ದಿಲ್ಲಿ ವಿವಿಯಲ್ಲಿ ಪ್ರೊಫೆಸರ್ ಆಗಿದ್ದ ಬಿ.ಎನ್.ಕೌಲ್ ಎಂಬವರ ಜೊತೆ ರಾಜಕುಮಾರಿಯ ವಿವಾಹ ನೆರವೇರಿತು. ರಾಜಕುಮಾರಿಯ ಮೂಲಕ ಕೌಲ್ ಅವರಿಗೆ ಪರಿಚಯ ವಾದರು ಅಟಲ್. ಬಳಿಕ ಅವರಿಬ್ಬರು ಆತ್ಮೀಯರಾದರು. ಈ ಮಧ್ಯೆ ಪ್ರೊ. ಕೌಲ್ ದುರಂತವೊಂದರಲ್ಲಿ ಮೃತಪಟ್ಟಾಗ ರಾಜಕುಮಾರಿ ಹಾಗೂ ನಮಿತ ಅಸಹಾಯ ಕರಾದರು. ಈ ಹಂತದಲ್ಲಿ ರಾಜಕುಮಾರಿ ಅಟಲ್ ಅವರ ನೆರವು ಯಾಚಿಸಿ ದಾಗ ಅವರಿಬ್ಬರನ್ನು ಅಂತಹ ದುಃಸ್ಥಿತಿಯಲ್ಲಿ ನೋಡಲಾಗದ ಅಟಲ್ ಅವರು ನಮಿತಾರನ್ನು ದತ್ತುಪುತ್ರಿಯನ್ನಾಗಿ ಸ್ವೀಕರಿಸಿದರಲ್ಲದೆ, ರಾಜಕುಮಾರಿಗೆ ತಮ್ಮ ನಿವಾಸದಲ್ಲೇ ನೆಲೆ ಒದಗಿಸಿಕೊಟ್ಟರು. ಅಂದಿನಿಂದ ರಾಜಕುಮಾರಿ ಹಾಗೂ ಅವರ ಕುಟುಂಬದವರು ಅಟಲ್‌ರೊಂದಿಗೇ ವಾಸಿಸುತ್ತಿದ್ದಾರೆ. ಅಟಲ್ ಅವರ ಈ ನಡೆ ಹಲವು ವಿವಾದಗಳಿಗೆ ಕಾರಣ ವಾಯಿತು. ಇದಾದ ಬಳಿಕ ರಾಜಕುಮಾರಿ ಹಾಗೂ ಅಟಲ್ ಮತ್ತಷ್ಟು ನಿಕಟರಾದರು ಹಾಗೂ ಪರಸ್ಪರ ಗೌರವ ಬೆಳೆಸಿ ಕೊಂಡರು. ಇವರಿಬ್ಬರು ಕಾಲೇಜು ದಿನದಿಂದಲೂ ಸ್ನೇಹಿತ ರಾಗಿದ್ದರು ಎಂಬ ವಿಷಯವನ್ನೇ ಮೂಲವಾಗಿರಿಸಿಕೊಂಡು ಗಾಳಿ ಸುದ್ದಿಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿತು.

ರಾಜಕುಮಾರಿ ಕೌಲ್ ಓರ್ವ ಮಮತಾಮಯಿ, ಸಹೃದಯಿ ಹಾಗೂ ಉದಾತ್ತ ಮನೋಭಾವದ ಮಹಿಳೆಯಾಗಿದ್ದರು. ಅವರು 2014ರಲ್ಲಿ ನಿಧನರಾದಾಗ ಅಟಲ್ ಬಿಹಾರಿ ವಾಜಪೇಯಿ ಬಹಳ ನೊಂದುಕೊಂಡಿದ್ದರು. ರಾಜಕುಮಾರಿ ಕೌಲ್ ಅಟಲ್ ಬದುಕಿನಲ್ಲಿ, ಸ್ನೇಹಿತೆಯಾಗಿ ಅಥವಾ ಅದಕ್ಕಿಂತಲೂ ಮಿಗಿಲಾದ ಪ್ರಮುಖ ಸ್ಥಾನ ಪಡೆದಿದ್ದರು ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ತೋರಿಸಿತು. ತಮ್ಮಿಬ್ಬರ ನಡುವಿನ ಸಂಬಂಧಕ್ಕೆ ಇಬ್ಬರೂ ಯಾವ ಹೆಸರ ನ್ನೂ ನೀಡದಿದ್ದರೂ ಗಾಳಿ ಸುದ್ದಿ ಗಾಢವಾಗಿ ಹಬ್ಬುತ್ತಿತ್ತು. ಬಹುಶಃ ಪರಸ್ಪರ ಗಾಢವಾದ ಗೌರವ ಹೊಂದಿದ್ದ ಕಾರಣ ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಇಬ್ಬರಿಗೂ ಅನಿಸಿರಲಿಲ್ಲ. ಗಾಳಿ ಸುದ್ದಿಯ ರೀತಿಯಲ್ಲಿಯೇ ಇಬ್ಬರ ಮಧ್ಯೆ ಸಂಬಂಧವಿದ್ದರೂ, ಇದನ್ನು ಕಂಡುಹಿಡಿಯಲಂತೂ ಅಸಾಧ್ಯವಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News