ರಾಜೀವ ಗಾಂಧಿ ಹತ್ಯೆ ಪ್ರಕರಣ: ಸರ್ವೋಚ್ಚ ನ್ಯಾಯಾಲಯದಲ್ಲಿ ಅಕ್ಟೋಬರ್‌ನಲ್ಲಿ ಅರ್ಜಿ ವಿಚಾರಣೆ

Update: 2018-08-17 14:44 GMT

ಹೊಸದಿಲ್ಲಿ,ಆ.17: ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಹತ್ಯೆ ಹಿಂದಿನ ಸಂಚಿನ ಕುರಿತು ಸಿಬಿಐ ನೇತೃತ್ವದ ಬಹು ವಿಭಾಗೀಯ ನಿಗಾ ಏಜೆನ್ಸಿ (ಎಂಡಿಎಂಎ)ಯ ತನಿಖೆಯ ಸ್ಥಿತಿಗತಿಗೆ ಸಂಬಂಧಿಸಿದಂತೆ ಪ್ರಕರಣದ ದೋಷಿಗಳಲ್ಲೋರ್ವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ನಲ್ಲಿ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿಳಿಸಿತು.

ನ್ಯಾ.ಎಂ.ಸಿ.ಜೈನ್ ವಿಚಾರಣಾ ಆಯೋಗದ ಶಿಫಾರಸಿನಂತೆ 1998ರಲ್ಲಿ ರಚನೆಯಾಗಿರುವ ಎಂಡಿಎಂಎ ರಾಜೀವ ಹತ್ಯೆಯ ಹಿಂದಿನ ಸಂಚಿನ ಕುರಿತು ತನಿಖೆ ನಡೆಸಿದ್ದು,ಸಿಬಿಐ ಅಧಿಕಾರಿಗಳ ನೇತೃತ್ವದ ಅದು ಗುಪ್ತಚರ ಸಂಸ್ಥೆ (ಐಬಿ),ರಾ,ಕಂದಾಯ ಗುಪ್ತಚರ ವಿಭಾಗ ಮತ್ತು ಇತರ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News