ತೂತ್ತುಕುಡಿಯ ವೇದಾಂತ ಘಟಕದ ಬಗ್ಗೆ ಎನ್‌ಜಿಟಿ ನಿರ್ಧರಿಸಲಿದೆ:ಸುಪ್ರೀಂ

Update: 2018-08-17 14:45 GMT

ಹೊಸದಿಲ್ಲಿ,ಆ.17: ತೂತ್ತುಕುಡಿಯಲ್ಲಿನ,ಈಗ ಮುಚ್ಚಲಾಗಿರುವ ತನ್ನ ಸ್ಟರ್ಲೈಟ್ ತಾಮ್ರ ತಯಾರಿಕೆ ಸ್ಥಾವರದಲ್ಲಿರುವ ಆಡಳಿತ ಕಚೇರಿಯನ್ನು ಪ್ರವೇಶಿಸಲು ವೇದಾಂತ ಕಂಪನಿಗೆ ಅನುಮತಿ ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಆದೇಶದ ವಿರುದ್ಧ ತಮಿಳುನಾಡು ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಲು ಶುಕ್ರವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು, ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಎನ್‌ಜಿಟಿಗೆ ಸೂಚಿಸಿತು.

ಸ್ಟರ್ಲೈಟ್ ಸ್ಥಾವರದೊಳಗಿರುವ ಆಡಳಿತ ಕಚೇರಿಗೆ ಪ್ರವೇಶಿಸಲು ಅವಕಾಶ ನೀಡುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಆ.9ರಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಎನ್‌ಜಿಟಿಯು,ವೇದಾಂತಕ್ಕೆ ಸ್ಥಾವರವನ್ನು ಪ್ರವೇಶಿಸಲು ಅನುಮತಿ ನೀಡಿತ್ತು. ಈ ಆದೇಶವನ್ನು ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News