ಮಾನಸಿಕ ರೋಗಗಳಿಗೂ ನೆರವಾಗುವ ಆರೋಗ್ಯ ನೀತಿಯನ್ನು ರೂಪಿಸಿ: ಐಆರ್‌ಡಿಎ

Update: 2018-08-17 15:32 GMT

ಬೆಂಗಳೂರು, ಆ.17: ದೇಶದಲ್ಲಿ ಮಾನಸಿಕ ಕಾಯಿಲೆ ಗಂಭೀರವಾಗಿ ಹೆಚ್ಚಾಗುತ್ತಿರುವುದರಿಂದ ಈ ಕಾಯಿಲೆಗಳಿಗೂ ಧನಸಹಾಯ ಒದಗಿಸುವಂಥ ವಿಮೆಯನ್ನು ರೂಪಿಸುವಂತೆ ವಿಮೆ ನಿಯಂತ್ರಣ ಮಂಡಳಿ ಐಆರ್‌ಡಿಎ ವಿಮಾದಾರ ಸಂಸ್ಥೆಗಳಿಗೆ ಸೂಚಿಸಿದೆ.

ಮೇ 29ರಂದು ಜಾರಿಗೆ ಬಂದಿರುವ ಮಾನಸಿಕ ಆರೋಗ್ಯಸೇವೆ ಕಾಯ್ದೆ, 2017 ಇತರ ದೈಹಿಕ ಕಾಯಲೆಗಳಿಗೆ ನೀಡುವಂತೆ ಮನಸಿಕ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯಲು ವೈದ್ಯಕೀಯ ವಿಮೆಯನ್ನು ಒದಗಿಸುವುದು ಕಡ್ಡಾಯಗೊಳಿಸಿದೆ. ಆದರೆ ಇಂದಿನವರೆಗೂ ದೇಶದಲ್ಲಿರುವ 33 ವಿಮಾ ಸಂಸ್ಥೆಗಳು, ಖಿನ್ನತೆ, ಶಿರೊಫ್ರೆನಿಯ ಮತ್ತು ಬೈಪೋಲಾರ್ ಮುಂತಾದ ಮಾನಸಿಕ ಕಾಯಿಲೆಗಳ ಚಿಕಿತ್ಸೆಗೆ ಧನಸಹಾಯ ಒದಗಸುವಂಥ ಆರೋಗ್ಯ ವಿಮೆಯನ್ನು ರೂಪಿಸಿಲ್ಲ.

ಎಲ್ಲ ವಿಮಾ ಸಂಸ್ಥೆಗಳು ತುರ್ತು ಅನ್ವಯವಾಗುವಂತೆ ಮಾನಸಿಕ ಆರೋಗ್ಯಸೇವೆ 2017ರಲ್ಲಿ ಸೂಚಿಸಲಾಗಿರುವ ನಿಬಂಧನೆಯನ್ನು ಪಾಲಿಸಬೇಕು ಎಂದು ಐಆರ್‌ಡಿಎ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಗ್ಯ ವಿಮೆ ನೀತಿಯಿಂದ ಮಾನಸಿಕ ಕಾಯಿಲೆಗಳನ್ನು ವಿಮಾ ಸಂಸ್ಥೆಗಳು ಇಷ್ಟರವರೆಗೂ ದೂರಯಿಡುತ್ತಲೇ ಬಂದಿವೆ. ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯಲ್ಲಿ ಆಟಿಸಂ ಮತ್ತು ಡೌನ್ಸ್ ಸಿಂಡ್ರಮ್ ಹಾಗೂ ಸ್ಟಾರ್ ಹೆಲ್ತ್ ವಿಮೆಯಲ್ಲಿ ಮಕ್ಕಳ ಆಟಿಸಂಗೆ ವೈದ್ಯಕೀಯ ನೆರವು ನೀಡಿರುವುದನ್ನು ಬಿಟ್ಟರೆ ಉಳಿದೆಲ್ಲ ಮಾನಸಿಕ ಕಾಯಿಲೆಗಳನ್ನು ಹೊರಗಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News