ಅಕ್ಕಿ ಮೂಟೆಗಳನ್ನು ಹೆಗಲ ಮೇಲೆ ಹೊತ್ತು ಪರಿಹಾರ ಶಿಬಿರಗಳಿಗೆ ಸಾಗಿಸಿದ ಐಎಎಸ್ ಅಧಿಕಾರಿಗಳು

Update: 2018-08-17 16:47 GMT

ಕೊಚ್ಚಿ, ಆ.17: ಸುಮಾರು 100 ವರ್ಷಗಳಲ್ಲೇ ಭೀಕರ ಮಳೆಗೆ ಸಿಲುಕಿ ನಲುಗುತ್ತಿರುವ ಕೇರಳದಲ್ಲಿ ಈಗಾಗಲೇ 324 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತ ಶಿಬಿರದಲ್ಲಿದ್ದಾರೆ.

ಈ ಸಂಕಷ್ಟಕರ ಪರಿಸ್ಥಿತಿಯಲ್ಲಿ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಎನ್ ಜಿಒಗಳು ಸಂತ್ರಸ್ತರಿಗೆ ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸಲು ಸರಕಾರವು ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ಪರಿಹಾರ ಶಿಬಿರವೊಂದಕ್ಕೆ ಅಕ್ಕಿಯ ಮೂಟೆಗಳನ್ನು ಬೆನ್ನ ಮೇಲೆ ಹೊತ್ತು ಸಾಗಿಸಿದ ಇಬ್ಬರು ಐಎಎಸ್ ಅಧಿಕಾರಿಗಳ ಫೋಟೊ ವೈರಲ್ ಆಗಿದೆ.

“”ಸರಕಾರಿ ಅಧಿಕಾರಿಗಳನ್ನು ಹೊಗಳಲು ಮಾಡಿರುವ ಟ್ವೀಟ್ ಇದಲ್ಲ. ನಿರಾಶ್ರಿತ ಶಿಬಿರಗಳಿಗೆ ಇಬ್ಬರು ಐಎಎಸ್ ಅಧಿಕಾರಿಗಳು ಅಕ್ಕಿ ಮೂಟೆ ಹೊತ್ತು ಸಾಗಿಸುತ್ತಿದ್ದಾರೆ. ಇಡೀ ಟ್ರಕ್ ಅನ್ನು ಅವರೇ ಅನ್ ಲೋಡ್ ಮಾಡಿದ್ದಾರೆ” ಎಂದು ಜೋಸೆಫ್ ಮೈಕಲ್ ಜೋಸ್ ಎಂಬವರು ಟ್ವೀಟ್ ಮಾಡಿ, ಅಧಿಕಾರಿಗಳ ಫೋಟೊ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರು ಅಧಿಕಾರಿಗಳ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News