ಉ.ಪ್ರ: 157 ಸರಕಾರಿ ಬಂಗಲೆಗಳ ತೆರವು

Update: 2018-08-17 18:19 GMT

ಹೊಸದಿಲ್ಲಿ,ಆ.17: ಮಾಜಿ ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಲಾಗಿದ್ದ ನಿವಾಸಗಳೂ ಸೇರಿದಂತೆ 157 ಸರಕಾರಿ ಬಂಗಲೆಗಳನ್ನು ತಾನು ತೆರವುಗೊಳಿಸಿರುವುದಾಗಿ ಉತ್ತರ ಪ್ರದೇಶ ಸರಕಾರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ವಿಧಿಸಿದ್ದ ಗಡುವನ್ನು ಮೀರಿ ಸರಕಾರಿ ಬಂಗಲೆಗಳಲ್ಲಿ ವಾಸವಿರುವವರಿಂದ ವಸತಿ ಶುಲ್ಕಗಳನ್ನು ವಸೂಲು ಮಾಡಲಾಗುವುದು ಎಂದೂ ಸರಕಾರದ ಪರ ವಕೀಲರು ತಿಳಿಸಿದರು.

ಈ ಬಗ್ಗೆ ಸಂಪೂರ್ಣ ವಿವರಗಳಿರುವ ಪ್ರಮಾಣಪತ್ರವನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಪೀಠವು ಸೂಚಿಸಿತು.

ಮಾಜಿ ಮುಖ್ಯಮತ್ರಿಗಳಿಗೆ ಹಂಚಿಕೆ ಮಾಡಲಾದ ನಿವಾಸಗಳನ್ನು ತೆರವುಗೊಳಿಸಲು ವಿಫಲವಾಗಿರುವುದಕ್ಕಾಗಿ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೋರಿದ್ದ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎ.11ರಂದು ಉ.ಪ್ರದೇಶ ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News