ಪತ್ನಿ ಪಕ್ಕದಲ್ಲಿರುವಾಗಲೇ ಮತ್ತೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ!

Update: 2018-08-18 17:12 GMT

ವಾಶಿಂಗ್ಟನ್, ಆ. 18: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಯೊಬ್ಬ ಅಮೆರಿಕದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಕ್ಕದಲ್ಲಿ ಮಲಗಿದ್ದ ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಸಾಬೀತಾಗಿದೆ.

ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಪ್ರಭು ರಾಮಮೂರ್ತಿಯ ಶಿಕ್ಷೆಯ ಪ್ರಮಾಣವನ್ನು ಅಮೆರಿಕದ ಜಿಲ್ಲಾ ನ್ಯಾಯಾಧೀಶರೊಬ್ಬರು ಡಿಸೆಂಬರ್ 12ರಂದು ಘೋಷಿಸುವರು ಎಂದು ‘ಡೆಟ್ರಾಯಿಟ್ ನ್ಯೂಸ್’ ಶುಕ್ರವಾರ ವರದಿ ಮಾಡಿದೆ.

ರಾಮಮೂರ್ತಿಯು ಜೀವನಪರ್ಯಂತ ಜೈಲು ಶಿಕ್ಷೆ ಎದುರಿಸುತ್ತಿದ್ದಾನೆ.

ಏಳು ತಿಂಗಳ ಹಿಂದೆ ಲಾಸ್ ವೇಗಸ್‌ನಿಂದ ಡೆಟ್ರಾಯಿಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನವೊಂದರಲ್ಲಿ ಆತ 22 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎನ್ನಲಾಗಿದೆ. ಘಟನೆ ನಡೆದಾಗ ಅವನ ಹೆಂಡತಿ ಪಕ್ಕದ ಆಸನದಲ್ಲಿದ್ದರು.

ಮಿಶಿಗನ್ ರಾಜ್ಯದ ಅತಿ ದೊಡ್ಡ ನಗರ ಡೆಟ್ರಾಯಿಟ್‌ನ ಫೆಡರಲ್ ನ್ಯಾಯಪೀಠ ಈ ತೀರ್ಪು ನೀಡಿದೆ.

ಐದು ದಿನಗಳ ವಿಚಾರಣೆಯ ಬಳಿಕ ನ್ಯಾಯಪೀಠವು ಸುಮಾರು 4 ಗಂಟೆಗಳ ಸಮಾಲೋಚನೆ ನಡೆಸಿದ ಈ ತೀರ್ಪು ನೀಡಿದೆ.

ಒಳಗೆ ಬಾಕಸ್

ಹೆಂಡತಿಯ ಪಕ್ಕದಲ್ಲೇ ಕಪಿಚೇಷ್ಟೆ!

‘‘ರಾಮಮೂರ್ತಿಯ ಪಕ್ಕದಲ್ಲಿ ಕಿಟಕಿಗೆ ತಾಗಿಕೊಂಡ ಆಸನದಲ್ಲಿ ನಾನು ಕೂತಿದ್ದೆ. ಅದೇ ಆಸನದ ಸಾಲಿನ ಇನ್ನೊಂದು ಬದಿಯಲ್ಲಿ ರಾಮಮೂರ್ತಿಯ ಪಕ್ಕದ ಆಸನದಲ್ಲಿ ಅವನ ಹೆಂಡತಿ ಕೂತಿದ್ದರು’’ ಎಂದು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಹೇಳಿದ್ದಾರೆ.

‘‘ನನಗೆ ನಿದ್ದೆ ಬಂತು. ಎಚ್ಚರವಾದಾಗ ಅವನ ಕೈ ನನ್ನ ಮೇಲಿತ್ತು. ನನ್ನ ಪ್ಯಾಂಟ್ ಮತ್ತು ಅಂಗಿಯ ಗುಂಡಿಗಳು ತೆರೆದಿದ್ದವು. ನನಗೆ ಎಚ್ಚರವಾದದ್ದನ್ನು ನೋಡಿ ಅವನು ಕೈ ತೆಗೆದನು’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News