ಪಾಕ್: ಪ್ರತಿಪಕ್ಷ ಮಿತ್ರಕೂಟದಲ್ಲಿ ಬಿರುಕು

Update: 2018-08-18 17:19 GMT

ಇಸ್ಲಾಮಾಬಾದ್, ಆ. 18: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆಗೊಳ್ಳುವ ಮೊದಲೇ ದೇಶದ ಪ್ರತಿಪಕ್ಷ ಮಿತ್ರಕೂಟದಲ್ಲಿ ಬಿರುಕುಗಳು ಉಂಟಾಗಿವೆ. ಇಮ್ರಾನ್ ಖಾನ್‌ರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷ ಸರಕಾರ ರಚಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರತಿಪಕ್ಷ ಮಿತ್ರಕೂಟವನ್ನು ರಚಿಸಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಪ್ರತಿಪಕ್ಷ ಮಿತ್ರಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ಎನ್ (ಪಿಎಂಎಲ್-ಎನ್)ನ ಶೆಹ್ಬಾಝ್ ಶರೀಫ್‌ರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಬಳಿಕ ಅವರಿಗೆ ಮತ ಹಾಕದಿರಲು ಬಿಲಾವಲ್ ಭುಟ್ಟೊರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಬಲಪಂಥೀಯ ಮುತ್ತಾಹಿದಾ ಮಜ್ಲಿಸೆ ಅಮಲ್ ಪಕ್ಷಗಳು ನಿರ್ಧರಿಸಿದವು.

ಶೆಹ್ಬಾಝ್ ಗೆಲ್ಲುವ ಸಾಧ್ಯತೆಯಿಲ್ಲದಿದ್ದರೂ, ಪ್ರತಿಪಕ್ಷ ಏಕತೆಯ ಸಂದೇಶವನ್ನು ನೀಡುವುದಕ್ಕಾಗಿ ಪ್ರತಿಪಕ್ಷದ ಜಂಟಿ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲಾಗಿತ್ತು.

ಆದರೆ, ಶುಕ್ರವಾರ ನ್ಯಾಶನಲ್ ಅಸೆಂಬ್ಲಿಯಲ್ಲಿ ನಡೆದ ಮತದಾನದಿಂದ ಪಿಪಿಪಿ ದೂರ ಉಳಿದಿತ್ತು. ಬಳಿಕ, ಇಮ್ರಾನ್ ವಿಜಯಿಯಾಗಿದ್ದಾರೆ ಎಂಬುದಾಗಿ ಸ್ಪೀಕರ್ ಘೋಷಿಸಿದಾಕ್ಷಣ ಪಕ್ಷದ ಸಂಸದರು ಸದನದಿಂದ ಹೊರನಡೆದರು.

ಸರ್ವಪಕ್ಷ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪಿಎಂಎಲ್-ಎನ್ ಪಕ್ಷವು ಉಲ್ಲಂಘಿಸಿದೆ ಎಂದು ಮುತ್ತಾಹಿದಾ ಮಜ್ಲಿಸೆ (ಎಂಎಂಎ) ಪಕ್ಷದ ನಾಯಕ ಲಿಯಾಕತ್ ಬಲೋಚ್ ಆರೋಪಿಸಿದ್ದಾರೆ.

ಒಳ್ಗೆ ಬಾಕ್ಸ್

22 ವರ್ಷ ಕಾದ ಕ್ರಿಕೆಟ್ ತಾರೆ

ಭ್ರಷ್ಟಾಚಾರಪೀಡಿತ ಪಾಕಿಸ್ತಾನವನ್ನು ಇಸ್ಲಾಮಿಕ್ ಕಲ್ಯಾಣ ರಾಷ್ಟ್ರವನ್ನಾಗಿ ಪರಿವರ್ತಿಸುವುದಕ್ಕಾಗಿ ದೇಶದ ಪ್ರಧಾನಿಯಾಗುವ ಕನಸು ಸಾಕಾರಗೊಳ್ಳಲು ದೇಶಕ್ಕೆ ಏಕೈಕ ಕ್ರಿಕೆಟ್ ವಿಶ್ವಕಪ್ ದೊರಕಿಸಿಕೊಟ್ಟ ಇಮ್ರಾನ್ ಖಾನ್ ಶನಿವಾರ ದೇಶದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕ್ರಿಕೆಟ್‌ನಂತೆ ರಾಜಕೀಯದಲ್ಲೂ ಚೇತೋಹಾರಿ ನಾಯಕನಾಗಿರುವ ಇಮ್ರಾನ್ 1996ರಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷವನ್ನು ಸ್ಥಾಪಿಸಿದರು.

ಆದರೆ, ಪಾಕಿಸ್ತಾನದ ರಾಜಕೀಯದಲ್ಲಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಗಳ ಪ್ರಾಬಲ್ಯವನ್ನು ಮುರಿಯಲು ಪರದಾಡಿದರು.

ಜುಲೈ 25ರಂದು ನಡೆದ ಚುನಾವಣೆಯಲ್ಲಿ ಸೇನೆ ಇಮ್ರಾನ್ ಖಾನ್ ಪರವಾಗಿ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಗಳ ಹೊರತಾಗಿಯೂ, ಕೊನೆಗೂ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ.

ಕ್ರಿಕೆಟಿಗ ಇಮ್ರಾನ್ ಖಾನ್ 22 ವರ್ಷ ಕಾದರು.

ನ್ಯಾಶನಲ್ ಅಸೆಂಬ್ಲಿಯಲ್ಲಿ ಶುಕ್ರವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ, 65 ವರ್ಷದ ಇಮ್ರಾನ್ ಖಾನ್ ಶನಿವಾರ ದೇಶದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕ್ರಿಕೆಟ್‌ನಂತೆ ರಾಜಕೀಯದಲ್ಲೂ ಚೇತೋಹಾರಿ ನಾಯಕನಾಗಿರುವ ಇಮ್ರಾನ್ 1996ರಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷವನ್ನು ಸ್ಥಾಪಿಸಿದರು.

ಆದರೆ, ಪಾಕಿಸ್ತಾನದ ರಾಜಕೀಯದಲ್ಲಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಗಳ ಪ್ರಾಬಲ್ಯವನ್ನು ಮುರಿಯಲು ಪರದಾಡಿದರು.

ಜುಲೈ 25ರಂದು ನಡೆದ ಚುನಾವಣೆಯಲ್ಲಿ ಸೇನೆ ಇಮ್ರಾನ್ ಖಾನ್ ಪರವಾಗಿ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಗಳ ಹೊರತಾಗಿಯೂ, ಕೊನೆಗೂ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News