ತಮಿಳಿನಲ್ಲಿ ಬರಲಿದೆ ಪಿಂಕ್?

Update: 2018-08-19 04:26 GMT

ಅಮಿತಾಭ್ ಬಚ್ಚನ್-ತಾಪ್ಸಿ ಪನ್ನು ನಟನೆಯ ಬಾಲಿವುಡ್ ಸಿನೆಮಾ ಪಿಂಕ್ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಗುವ ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ದುಡ್ಡು ಬಾಚಿತ್ತು. ಸದ್ಯ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಮಾಡಿರುವ ಪಾತ್ರವನ್ನು ತಮಿಳಿನಲ್ಲಿ ತಲ ಅಜಿತ್ ಮಾಡಲು ಒಪ್ಪಿಕೊಂಡಿದ್ದಾರೆ. ವಿನೋದ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2016ರಲ್ಲಿ ಬಿಡುಗಡಯಾದ ಪಿಂಕ್ ಚಿತ್ರದಲ್ಲಿ ವೇಶ್ಯಾವಾಟಿಕೆಯ ಸುಳ್ಳು ಆರೋಪ ಹೊರಿಸಲಾಗಿರುವ ಮೂವರು ಯುವತಿಯರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ವಕೀಲನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಮನೋಜ್ಞ ಅಭಿನಯ ನೀಡಿದ್ದರು. ಇದೀಗ ಈ ಪಾತ್ರಕ್ಕೆ ಅಜಿತ್ ಜೀವ ತುಂಬಲು ಹೊರಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇವಲ ಆ್ಯಕ್ಷನ್ ಸಿನೆಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅಜಿತ್ ಪಿಂಕ್‌ನಂಥ ಅಭಿನಯ ಕೇಂದ್ರಿತ ಚಿತ್ರವನ್ನು ಒಪ್ಪಿರುವುದು ತಮಿಳು ಚಿತ್ರರಂಗದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News