ಕಪೂರ್-ಪರಿಣಿತಿ ಹೇಳಲಿದ್ದಾರೆ ನಮಸ್ತೆ ಇಂಗ್ಲೆಂಡ್!

Update: 2018-08-19 04:29 GMT

ನಿರ್ದೇಶಕ ವಿಪುಲ್ ಅಮೃತಲಾಲ್ ಶಾ 2007ರಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಜೊತೆ ನಮಸ್ತೆ ಲಂಡನ್ ಎಂಬ ಚಿತ್ರ ಮಾಡಿದ್ದರು. ಈ ಚಿತ್ರ ಆ ಸಮಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಸೂಪರ್ ಹಿಟ್ ಆಗಿತ್ತು. ಇದೀಗ ಶಾ, ಈ ಸಿನೆಮಾದ ಮುಂದಿನ ಭಾಗವಾಗಿ ನಮಸ್ತೆ ಇಂಗ್ಲೆಂಡ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಮಸ್ತೆ ಇಂಗ್ಲೆಂಡ್ ಸಿನೆಮಾದಲ್ಲಿ ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

ಪೆನ್ ಇಂಡಿಯ ಲಿಮಿಟೆಡ್, ನಮಸ್ತೆ ಪ್ರೊಡಕ್ಷನ್ಸ್ ಲಿ., ರಿಲಯನ್ಸ್ ಎಂಟರ್ಟೈನ್ಮೆಂಟ್ ಹಾಗೂ ಬ್ಲಾಕ್‌ಬಸ್ಟರ್ ಮೂವಿ ಎಂಟರ್ಟೈನರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಶಾ, ರಿಲಯನ್ಸ್ ಎಂಟರ್ಟೈನ್ಮೆಂಟ್ ಸೇರಿದಂತೆ ಅನೇಕರು ಹಣ ಹೂಡಿದ್ದಾರೆ. ಇತ್ತೀಚೆಗೆ ನಮಸ್ತೆ ಇಂಗ್ಲೆಂಡ್ ಸಿನೆಮಾದ ಪೋಸ್ಟರ್‌ವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತದ ಭಾಗ ಅಕ್ಸೈ ಚಿನ್ ಪ್ರದೇಶ ನಾಪತ್ತೆಯಾಗಿತ್ತು. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಚಿತ್ರತಂಡ ವ್ಯಾಪಕ ಟೀಕೆಗೆ ಗುರಿಯಾಗಿತ್ತು ಜೊತೆಗೆ ಕಾನೂನು ಸಂಕಷ್ಟವನ್ನು ಎದುರಿಸಬೇಕಾದ ಅನಿವಾರ್ಯತೆಗೆ ಒಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News