ಕೇರಳ ಪ್ರವಾಹ ‘ತೀವ್ರ ಸ್ವರೂಪದ ವಿಕೋಪ’ ಎಂದು ಘೋಷಿಸಿದ ಗೃಹ ಸಚಿವಾಲಯ

Update: 2018-08-20 14:01 GMT

ಹೊಸದಿಲ್ಲಿ, ಆ.20: ಕೇರಳವನ್ನು ಸಂಕಷ್ಟಕ್ಕೆ ದೂಡಿರುವ ಪ್ರವಾಹವನ್ನು ಕೇಂದ್ರ ಸರಕಾರವು ‘ತೀವ್ರ ಸ್ವರೂಪದ ವಿಪತ್ತು’ ಎಂದು ಸೋಮವಾರ ಘೋಷಿಸಿದೆ. “ಕೇರಳದ ಪ್ರವಾಹ ಹಾಗು ಭೂಕುಸಿತದ ಪ್ರಮಾಣವನ್ನು ಪರಿಗಣಿಸಿ ಇದು ತೀವ್ರ ಸ್ವರೂಪದ ವಿಪತ್ತು’ ಎಂದು ಘೋಷಿಸಲಾಗಿದೆ” ಎಂದು ಗೃಹ ಸಚಿವಾಲಯ ತಿಳಿಸಿದೆ.

ಆಗಸ್ಟ್ 8ರಿಂದ ಸುರಿಯುತ್ತಿರುವ ಮಳೆ ಇಂದು ಕಡಿಮೆಯಾಗಿದ್ದು, ಕೇರಳಿಗರು ನಿಟ್ಟುಸಿರುವ ಬಿಡುವಂತಾಗಿದೆ. ಪ್ರವಾಹದಲ್ಲಿ 200ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 10 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರ ಶಿಬಿರದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News