ಕ್ಯಾನ್ಸರ್‌ನಿಂದ ನಟಿ ಸುಜಾತಾ ಕುಮಾರ್ ನಿಧನ

Update: 2018-08-20 15:42 GMT

ಮುಂಬೈ, ಆ.20: ‘ಇಂಗ್ಲಿಷ್ ವಿಂಗ್ಲಿಷ್’ ಸಿನೆಮಾದ ನಟನೆಯಿಂದ ಪ್ರಸಿದ್ಧರಾಗಿದ್ದ ನಟಿ ಸುಜಾತಾ ಕುಮಾರ್ ಅವರು ಕ್ಯಾನ್ಸರ್‌ನಿಂದಾಗಿ ರವಿವಾರ ರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದ ನಾಲ್ಕನೇ ಹಂತದಲ್ಲಿದ್ದ ಸುಜಾತಾರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಾಯಿಲೆ ಉಲ್ಬಣಗೊಂಡು ಅವರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಗೋರಿ ತೇರಿ ಪ್ಯಾರ್ ಮೆ’ ಮುಂತಾದ ಸಿನೆಮಾಗಳಲ್ಲಿ ನಟಿಸಿದ್ದ ಸುಜಾತಾ ಹಲವು ಟಿವಿ ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದರು. ನಮ್ಮೆಲ್ಲರ ಪ್ರೀತಿಪಾತ್ರರಾಗಿದ್ದ ಸುಜಾತಾ ಕುಮಾರ್ ನಿಧನರಾಗಿದ್ದು ಬೇರೊಂದು ಉತ್ತಮ ಸ್ಥಳಕ್ಕೆ ತೆರಳಿದ್ದಾರೆ ಎಂದು ಸುಜಾತಾ ಅವರ ಸಹೋದರಿ, ನಟಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News