ನೆರವಿನ ಹಸ್ತ ಚಾಚಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು

Update: 2018-08-20 16:53 GMT

ಹೊಸದಿಲ್ಲಿ, ಆ.20: ಕೇರಳದ ಮಹಾಮಳೆಯ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೂಡ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸುಪ್ರೀಂ ಕೋರ್ಟ್ 25 ನ್ಯಾಯಾಧೀಶರು ತಲಾ 25 ಸಾವಿರ ರೂ.ವನ್ನು ನೆರೆ ಪರಿಹಾರ ನಿಧಿಗೆ ನೀಡಿದ್ದಾರೆ. ಇದನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿ ಕೊಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ನೆರೆಯಿಂದಾಗಿ ಕೇರಳ ತೀವ್ರವಾಗಿ ನಲುಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಉಲ್ಲೇಖಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಹೇಳಿದೆ.

ಆಟಾರ್ನಿ ಜನರಲ್ ಅವರು ನೆರೆ ಪರಿಹಾರ ನಿಧಿಗೆ 1 ಕೋ. ರೂ. ನೀಡಿದ್ದಾರೆ. ಹಿರಿಯ ನ್ಯಾಯವಾದಿಗಳು ಕೂಡ ದೇಣಿಗೆ ನೀಡಿದ್ದಾರೆ.

ನಮಗೆ ಆಹಾರ, ಬಟ್ಟೆ ಬೇಕಾಗಿಲ್ಲ. ಬದಲಾಗಿ ಕೇರಳವನ್ನು ಮರು ನಿರ್ಮಾಣ ಮಾಡಲು, ಮರು ರೂಪಿಸಲು, ಜನ ಜೀವನವನ್ನು ಹಿಂದಿನ ಸ್ಥಿತಿಗೆ ತರಲು ತಾಂತ್ರಿಕ ಅನುಭವವಿರುವ ಪ್ಲಂಬರ್, ಕಾರ್ಪೆಂಟರ್, ಎಲಕ್ಟ್ರೀಶಿಯನ್ ಬೇಕಾಗಿದ್ದಾರೆ.

ಕೆ.ಜೆ. ಅಲ್ಫೋನ್ಸ್, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News