ಜಮ್ಮು-ಕಾಶ್ಮೀರ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್

Update: 2018-08-21 14:56 GMT

ಹೊಸದಿಲ್ಲಿ, ಆ.21: ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ವರ್ಗಾವಣೆಗೊಂಡಿದ್ದಾರೆ. ಈ ಹಿಂದೆ ಅವರು ಅವರು ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.

ಈ ವರ್ಗಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಲಾಲ್ ಜಿ ಟಂಡನ್ ಬಿಹಾರದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ರಾಜ್ಯಪಾಲರಾಗಿ ಸತ್ಯದೇವ್ ನಾರಾಯಣ್ ಆರ್ಯ,ತ್ರಿಪುರಾ ರಾಜ್ಯಪಾಲರಾಗಿ ಕಪ್ತಾನ್ ಸಿಂಗ್ ಸೋಲಂಕಿ, ಮೇಘಾಲಯ ರಾಜ್ಯಪಾಲರಾಗಿ ತಥಾಗತಾ ರಾಯ್, ಸಿಕ್ಕಿಂ ರಾಜ್ಯಪಾಲರಾಗಿ ಗಂಗಾಪ್ರಸಾದ್ ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News