×
Ad

ಶಿವಸೇನೆ ಕಾರ್ಪೊರೇಟರ್ ವಿರುದ್ಧ ಯುವತಿಗೆ ಲೈಂಗಿಕ ಕಿರುಕುಳ ಆರೋಪ

Update: 2018-08-22 10:48 IST

ಮುಂಬೈ, ಆ.21: ಆರ್ಥಿಕ ನೆರವು ನೀಡುವ ಭರವಸೆ ನೀಡಿ 19ರ ಹರೆಯದ ಕಾಲೇಜು ಕನ್ಯೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಶಿವಸೇನೆ ಕಾರ್ಪೊರೇಟರ್ ವಿರುದ್ಧ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವಿಮುಂಬೈ ಮಹಾನಗರ ಪಾಲಿಕೆ(ಎನ್‌ಎಂಎಂಸಿ)ಶಿವಸೇನೆ ಕಾರ್ಪೊರೇಟರ್ ನಾಮ್‌ದೇವ್ ಭಗತ್ ರಾಯಗಢ ಜಿಲ್ಲೆಯ ಕರಾವಳಿ ಪಟ್ಟಣ ಉರಾನ್‌ನ ಫಾರ್ಮ್‌ಹೌಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎನ್‌ಎಂಎಂಸಿ ಸ್ಥಾಯಿ ಸಮಿತಿ ಸದಸ್ಯರಾಗಿರುವ 51ರ ಹರೆಯದ ಕಾರ್ಪೊರೇಟರ್ ಆರ್ಥಿಕ ನೆರವು ನೀಡುವುದಾಗಿ ಯುವತಿಯನ್ನು ತನ್ನ ಫಾರ್ಮ್‌ಹೌಸ್‌ಗೆ ಕರೆದಿದ್ದರು. ಯುವತಿಯು ಕಾರ್ಪೊರೇಟರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಉರಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಾರ್ಪೊರೇಟರ್ ನಾಮ್‌ದೇವ್ ನಾಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News