ನೀರವ್ ಮೋದಿ, ಮೆಹುಲ್ ಚೋಕ್ಸಿ ಅಕ್ರಮ ಬಂಗ್ಲೆ ಧ್ವಂಸಕ್ಕೆ ಮಹಾರಾಷ್ಟ್ರ ಸರಕಾರ ಆದೇಶ

Update: 2018-08-22 05:34 GMT

ಮುಂಬೈ, ಆ.22: ದೇಶಭ್ರಷ್ಟ ಡೈಮಂಡ್ ಉದ್ಯಮಿಗಳು ಹಾಗೂ ಬಹುಕೋಟಿ ರೂ. ಪಿಎನ್‌ಬಿ ಹಗರಣದ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿರುವ ರಾಯ್‌ಗಢ ಜಿಲ್ಲೆಯಲ್ಲಿರುವ ಅಕ್ರಮ ಬಂಗ್ಲೆಗಳನ್ನು ಧ್ವಂಸಗೊಳಿಸಲು ಮಹಾರಾಷ್ಟ್ರ ಸರಕಾರ ಆದೇಶಿಸಿದೆ ಎಂದು ರಾಜ್ಯ ಪರಿಸರ ಸಚಿವ ರಾಮ್‌ದಾಸ್ ಕದಮ್ ಹೇಳಿದ್ದಾರೆ.

ಅಕ್ರಮ ಕಟ್ಟಡ ಬಗ್ಗೆ ರಾಜ್ಯ ಸರಕಾರ ಯಾವುದೇ ಕ್ರಮಕೈಗೊಳ್ಳದ ಕುರಿತು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರಕಾರ ಈ ಆದೇಶ ನೀಡಿದೆ. ‘‘ಬಂಗ್ಲೆಗಳ ಧ್ವಂಸಕ್ಕೆ ಅನುಮತಿ ಕೋರಿ ಸರಕಾರ ಜಾರಿನಿರ್ದೇಶನಾಯಕ್ಕೆ ಪತ್ರ ಬರೆದಿದೆ. ಇಡಿ ಅನುಮತಿ ದೊರೆತ ತಕ್ಷಣ ಧ್ವಂಸಕಾರ್ಯಾಚರಣೆ ಆರಂಭಿಸಲಾಗುತ್ತದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಮೋದಿ, ಚೋಕ್ಸಿ ಹಾಗೂ ಇತರ ಸೆಲೆಬ್ರಿಟಿಗಳ 121 ಅಕ್ರಮ ಕಟ್ಟಡಗಳನ್ನು ಅಲಿಬಾಗ್‌ನಲ್ಲಿ ಗುರುತಿಸಲಾಗಿದೆ. ಕರಾವಳಿ ನಿಯಂತ್ರಣ ವಲಯ ಮಾನದಂಡಗಳನ್ನು ಉಲ್ಲಂಘಿಸಿ, ಪ್ರಾಧಿಕಾರ ಸರಿಯಾದ ಯೋಜನೆಗಳಿಲ್ಲದೆ ಬಂಗ್ಲೆಗಳನ್ನು ನಿರ್ಮಿಸಲಾಗಿತ್ತು’’ ಎಂದು ಸಚಿವ ಕದಮ್ ಹೇಳಿದ್ದಾರೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News