×
Ad

ಮುಂಬೈ ವಸತಿ ಸಮುಚ್ಚಯದಲ್ಲಿ ಬೆಂಕಿ: ನಾಲ್ವರು ಬಲಿ

Update: 2018-08-22 11:26 IST

 ಮುಂಬೈ, ಆ.22: ಮುಂಬೈ ಮಹಾನಗರದ ಪರೇಲ್ ಪ್ರದೇಶದ ಹಿಂದ್‌ಮಾತಾ ಸಿನೆಮಾ ಬಳಿಯಿರುವ ವಸತಿ ಸಮುಚ್ಚಯ ಕ್ರಿಸ್ಟಲ್ ಟವರ್‌ನ 12ನೇ ಮಹಡಿಯಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದರೆ, ಇನ್ನು ಹಲವು ಮಂದಿ ಟವರ್‌ನೊಳಗೆ ಸಿಲುಕಿರುವ ಶಂಕೆಯಿದೆ.

   ‘‘ಬೆಂಕಿ ನಂದಿಸಲು ಅಗ್ನಿಶಾಮಕದಳದ 20 ಯಂತ್ರಗಳು ಸ್ಥಳಕ್ಕೆ ಧಾವಿಸಿವೆ. ಒಟ್ಟು 20 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಮಹಿಳೆ ಸಹಿತ ನಾಲ್ವರು ಮೃತಪಟ್ಟಿದ್ದಾರೆ. ಟವರ್‌ನೊಳಗೆ ಸಿಲುಕಿರುವವರನ್ನು ಕ್ರೇನ್ ಮೂಲಕ ರಕ್ಷಿಸಲಾಗುತ್ತಿದೆ’’ ಎಂದು ಕೆಇಎಂ ಆಸ್ಪತ್ರೆಯ ಡೀನ್ ಅವಿನಾಶ್ ತಿಳಿಸಿದ್ದಾರೆ.

‘‘ದಾದರ್‌ನ ಹಿಂದ್‌ಮಾತಾ ಸಿನೆಮಾ ಸಮೀಪವಿರುವ ಕ್ರಿಸ್ಟಲ್ ಟವರ್ ಕಟ್ಟಡದ 12ನೇ ಮಾಳಿಗೆಯಲ್ಲಿ ಬೆಂಕಿ ತಗಲಿರುವ ಬಗ್ಗೆ ಬೆಳಗ್ಗೆ 8.32ಕ್ಕೆ ಫೈಯರ್ ಬ್ರಿಗೇಡ್ ಕಂಟ್ರೋಲ್ ರೂಮ್‌ಗೆ ಕರೆ ಬಂದಿತ್ತು. ಬೆಂಕಿಯ ಪ್ರಕೋಪಕ್ಕೆ ತೀವ್ರ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಪ್ರತಿ ಫ್ಲಾಟ್‌ಗಳನ್ನು ಪರೀಕ್ಷಿಸಿ ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಎತ್ತರದ ಕಟ್ಟಡದಲ್ಲಿ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಕಟ್ಟಡದಲ್ಲಿರುವ ಅಗ್ನಿಶಾಮಕ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿರಲಿಲ್ಲ. ಬೆಂಕಿಯನ್ನು ನಂದಿಸುವುದೇ ದೊಡ್ಡ ಸಾಹಸ’’ ಎಂದು ಮುಂಬೈ ಫೈಯರ್ ಬ್ರಿಗೇಡ್ ಮುಖ್ಯಸ್ಥ ಪಿಎಸ್ ರಹಾಂಗ್‌ಡಾಲೆ ಹೇಳಿದ್ದಾರೆ.

17 ಮಹಡಿಯ ಗಗನಚುಂಬಿ ಕ್ರಿಸ್ಟಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದೂ ಇನ್ನೂ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News