×
Ad

ದಿಲ್ಲಿಯ ದೂರದರ್ಶನ ಭವನದಲ್ಲಿ ಬೆಂಕಿ

Update: 2018-08-22 17:01 IST

ದಿಲ್ಲಿ,ಆ.22: ಇಲ್ಲಿಯ ಮಂಡಿ ಹೌಸ್‌ನಲ್ಲಿರುವ ದೂರದರ್ಶನ ಭವನದ ಹವಾನಿಯಂತ್ರಣ ಸ್ಥಾವರದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿತ್ತು. ಮಧ್ಯಾಹ್ನ 12:50ರ ಸುಮಾರಿಗೆ ಅಗ್ನಿಶಾಮಕ ದಳದ ಕಚೇರಿಗೆ ಮಾಹಿತಿ ತಲುಪಿದ್ದು,ಸ್ಥಳಕ್ಕೆ ಧಾವಿಸಿದ್ದ ಐದು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಬೆಂಕಿ ಅವಘಡಕ್ಕೆ ಗುರಿಯಾಗಿದ್ದ ಹವಾನಿಯಂತ್ರಣ ಸ್ಥಾವರ ದೂರದರ್ಶನ ಭವನದ ನೆಲ ಅಂತಸ್ತಿನಲ್ಲಿದೆ. ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News